Slide
Slide
Slide
previous arrow
next arrow

ಮಕ್ಕಳು ಸುಸಂಸ್ಕೃತರಾದರೆ ದೇಶಕ್ಕೆ ಆಸ್ತಿ: ಭೀಮೇಶ್ವರ ಜೋಶಿ

300x250 AD

ಕುಮಟಾ: ಮಕ್ಕಳು ದೇಶಕ್ಕೆ ಆಸ್ತಿಯಾಗುವ ರೀತಿಯಲ್ಲಿ ಪರಿವರ್ತನೆಯಾಗಬೇಕು. ಅವರು ಸುಸಂಸ್ಕೃತರಾಗಬೇಕು. ಸಂಸ್ಕೃತಿಯ ನೆಲೆಗಟ್ಟಿನಲ್ಲಿ ತಮ್ಮ ಜೀವನವನ್ನು ಪರಿಪೂರ್ಣಗೊಳಿಸಿಕೊಳ್ಳಬೇಕು. ಸುಸಂಸ್ಕೃತರಾದಾಗ ಮಾತ್ರ ಅವರು ದೇಶಕ್ಕೆ ಆಸ್ತಿ ಆಗಬಲ್ಲರು ಎಂದು ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಭೀಮೇಶ್ವರ ಜೋಶಿ ನುಡಿದರು.

ಮೂರೂರು ಪ್ರಗತಿ ವಿದ್ಯಾಲಯದ ವರುಷದ ಹರುಷ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು, ಮಾತನಾಡಿ, ಜೀವನದಲ್ಲಿ ಪ್ರತಿಯೊಬ್ಬರೂ ಹರುಷವನ್ನು ಅಪೇಕ್ಷೆ ಪಡುತ್ತಾರೆ. ಹರ್ಷ ಪಡುವುದಕ್ಕೆ ಕಾರಣವಾಗಿರುವ ಹಾಗೂ ಹರ್ಷ ಬರುವುದಕ್ಕೆ ಸಾಧ್ಯವಾಗಿರುವ ಸಾಧನೆಗೆ ತನ್ನನ್ನು ತಾನು ತೊಡಗಿಸಿಕೊಂಡಾಗ, ಆ ಪ್ರಗತಿಯ ಹಾದಿಯಲ್ಲಿ ಸಾಗುವ ಪ್ರಯತ್ನ ಮಾಡಿದಾಗ ಆ ಹರುಷ ತನ್ನಿಂದ ತಾನೇ ಒಳಗೆ ಪ್ರವೇಶವಾಗುತ್ತದೆ. ನಿತ್ಯವೂ ಹರುಷವನ್ನು ಕಾಣುವ ಭಾಗ್ಯ ಪ್ರಾಪ್ತವಾಗುತ್ತದೆ. ಅದಕ್ಕೆ ಬೇಕಾದದ್ದು ಮುಖ್ಯವಾಗಿ ಜ್ಞಾನ. ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ. ತನ್ನನ್ನು ತಾನು ಅರಿತುಕೊಳ್ಳುವ ಜ್ಞಾನ ಸಂಪಾದನೆ ಬಹು ಮುಖ್ಯ. ಅಂತಹ ಜ್ಞಾನ ಸಂಪಾದನೆಯಿOದ ದೇಶಕ್ಕೆ ಆಸ್ತಿಯಾಗಿ ತಂದೆ ತಾಯಿಗಳಿಗೆ ಒಳ್ಳೆಯ ಮಕ್ಕಳಾಗಿ ಗುರುಗಳಿಗೆ ಉತ್ತಮ ಶಿಷ್ಯರಾಗಿ ಬದುಕಬೇಕು. ದೇವ ಋಣ ಪಿತೃಋಣ ಸಮಾಜದ ಋಣ ತೀರಿಸುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಆ ಋಣಭಾರ ತೀರಿಸುವ ಪ್ರಯತ್ನವಾಗಲಿ ಎಂದು ಅವರು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿದ್ಯಾನಿಕೇತನ ಸಂಸ್ಥೆಯ ಉಪಾಧ್ಯಕ್ಷರಾದ ವಿ .ಎಸ್ ಹೆಗಡೆ ಮಾತನಾಡಿ, ಮಕ್ಕಳ ಸಾಧನೆಯಿಂದ ನಿಜಕ್ಕೂ ಇಂದು ಇಲ್ಲಿ ಹರುಷ ಮನೆ ಮಾಡಿದೆ. ವಿವಿಧ ಸ್ಪರ್ಧಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಪಾರಿತೋಷಕ ಪಡೆದ ವಿದ್ಯಾರ್ಥಿಗಳು ಮತ್ತು ಪಾಲಕರ ಸಂಗಮದಿoದ ಈ ಕಾರ್ಯಕ್ರಮ ಸಂಭ್ರಮಗೊoಡಿದೆ ವಿದ್ಯಾರ್ಥಿಗಳಿಗೆ ಶುಭವಾಗಲಿ ಎಂದರು.

300x250 AD

ವೇದಿಕೆಯಲ್ಲಿ ವಿದ್ಯಾನಿಕೇತನ ಸಂಸ್ಥೆಯ ಸದಸ್ಯರಾದ ಸುಬ್ರಾಯ್ ಭಟ್ಟ, ಟಿ. ಆರ್. ಜೋಶಿ , ಜಿ ಎಸ್ ಭಟ್ಟ, ಐ.ಪಿ. ಭಟ್ಟ, ಎಸ್ ವಿ. ಹೆಗಡೆ ಭದ್ರನ್ ಹಾಗೂ ಪ್ರಾಚಾರ್ಯರಾದ ಜಿ. ಎಂ ಭಟ್ಟ, ಮುಖ್ಯೋಪಾಧ್ಯಾಯರಾದ ಶ್ರೀಪಾದ ಭಟ್ಟ, ವಿ. ಎಸ್. ಗೌಡ, ವಿವೇಕ್ ಆಚಾರಿ, ನಾಗವೇಣಿ ಭಟ್ಟ, ಶಿಕ್ಷಕರಾದ ಲೋಕೇಶ್ ಹೆಗಡೆ ಹಾಗೂ ಮಹಾಲಕ್ಷ್ಮೀ ಗೌಡ, ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಾಧನೆಗೈದ ವಿದ್ಯಾರ್ಥಿಗಳಿಗೆ ಗಣ್ಯರು ಪಾರಿತೋಷಕ ಹಾಗೂ ದತ್ತಿ ನಿಧಿ ಪುರಸ್ಕಾರ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು.

Share This
300x250 AD
300x250 AD
300x250 AD
Back to top