ಹಳಿಯಾಳ: ಈ ಭಾಗದ ಬಹುದೊಡ್ಡ ಪ್ರಥಮ ದರ್ಜೆ ಕಾಲೇಜ್ ನಮ್ಮದಾಗಿದ್ದು, ಈಗ ಇಲ್ಲಿ 1300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರ ಜೊತೆಗೆ ಸಾವಿರಾರು ವಿದ್ಯಾರ್ಥಿಗಳು ಈ ಕಾಲೇಜಿನಿಂದ ಪದವಿ ಪಡೆದು ಸರಕಾರಿ ವಿವಿಧ ಇಲಾಖೆಯಲ್ಲಿ, ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವುದಲ್ಲದೆ ಇನ್ನೂ ಕೆಲ ವಿದ್ಯಾರ್ಥಿಗಳು ಸ್ವತಃ ಉದ್ಯಮಿಯಾಗಿ ಹಾಗೂ ರಾಜಕಾರಣ ಪ್ರವೇಶಿಸಿ ಜನಪ್ರತಿನಿಧಿಯಾಗಿ ಕಾರ್ಯನಿರ್ವಹಿಸುವುದು ನೋಡಿದರೆ ನಮಗೆ ಹೆಮ್ಮೆ ಅನಿಸುತ್ತದೆ ಎಂದು ಹವಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಚಂದ್ರಶೇಖರ್ ಲಮಾಣಿ ಹೇಳಿದರು.
ತಾಲೂಕಿನ ಹೊರವಲಯದಲ್ಲಿರುವ ಹವಗಿ ಸಮೀಪದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚಿಗೆ ಹಮ್ಮಿಕೊಂಡಂತಹ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಸರಕಾರಿ ನೊಂದಣಿಯ ಪತ್ರವನ್ನು ಹಳೆಯ ವಿದ್ಯಾರ್ಥಿಗಳ ಸಂಘಕ್ಕೆ ಹಸ್ತಾಂತರಿಸಿ ಮಾತನಾಡಿದರು.
ಹಳೆಯ ವಿದ್ಯಾರ್ಥಿಗಳ ಸಂಘವು ಸಹಕಾರಿ ನೊಂದಣಿ ಕಾಯ್ದೆ ಪ್ರಕಾರ ನೊಂದಣಿಯಾಗಿದ್ದು, ಈ ಸಂಘದ ನೊಂದಣಿಯಿಂದ ನಮ್ಮ ಕಾಲೇಜಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹಾಗೂ ಕಾಲೇಜಿನ ನ್ಯಾಕ್ ಅಂಕ ಪಡೆಯಲು ಬಹಳ ಸಹಕಾರಿಯಾಗಲಿದೆ ಎಂದರು. ಇದರ ಜೊತೆಯಾಗಿ ಕಳೆದ 1983 ರಿಂದ ಪ್ರಾರಂಭವಾದ ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ಪದವಿ ಪಡೆದಿರುವಂತ ಎಲ್ಲ ಹಳೆಯ ವಿದ್ಯಾರ್ಥಿಗಳು ತಮ್ಮೆಲ್ಲರ ಅನುಕೂಲಕ್ಕಾಗಿ ಹಾಗೂ ತಮ್ಮೆಲ್ಲರ ಸಹಕಾರದಿಂದ ಕಾಲೇಜಿನ ಅಭಿವೃದ್ಧಿಗಾಗಿ ಈ ಸಂಘವನ್ನು ಅಸ್ತಿತ್ವಕ್ಕೆ ತಂದಿದ್ದು ಇರುತ್ತದೆ. ಆದ್ದರಿಂದ ಕಾಲೇಜಿನ ಎಲ್ಲಾ ಹಳೆಯ ವಿದ್ಯಾರ್ಥಿಗಳು ಹಳೆಯ ವಿದ್ಯಾರ್ಥಿಗಳ ಸಂಘದಲ್ಲಿ ಸದಸ್ಯತ್ವವನ್ನು ಪಡೆದು ಸದ್ಯದ ಪರಿಸ್ಥಿತಿಗೆ ಕಾಲೇಜಿಗೆ ಹಳೆಯ ವಿದ್ಯಾರ್ಥಿಗಳ ಸಹಕಾರವು ಸಂದರ್ಭವಾದಾಗ ತಾವೆಲ್ಲರೂ ಸಹಕರಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಹಳಿಯಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ರಾಮಾ ಗೌಡಾ, ಉಪಾಧ್ಯಕ್ಷರಾಗಿ ಕಾಶೀಮ ಹಟ್ಟಿಹೋಳಿ, ಕಾರ್ಯಕದರ್ಶಿ ರಮೇಶ ಬಿಲೇಕಲ್, ಖಜಾಂನಚಿಯಾಗಿ ರಂಜಿತಾ ಅಂಬಿಪ್ಪಿ, ಸದಸ್ಯರಾಗಿ ಲಕ್ಷ್ಮೀ ಬಡಿಗೇರ, ಸುನೀತಾ ಮೀರಾಶಿ, ಯುವರಾಜ ನಾಚನೇಕಾರ, ರಾಘವೇಂದ್ರ ವೆಂಕಪ್ಪಗೌಡ, ವಿನೋದ ವಡ್ಡರ ಇವರನ್ನು ಆಯ್ಕೆ ಮಾಡಿ ಇವರಿಗೆ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಮುನ್ನಡೆಸಲು ಜವಾಬ್ದಾರಿ ನೀಡಿದರು.