ಶಿರಸಿ: ನಗರದ ಲಯನ್ಸ್ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ಪವರ್ ಆಫ್ ಮೈಂಡ್ ವಿಶೇಷ ರೀತಿಯ ಸಂವಹನ ಕಾರ್ಯಕ್ರಮವನ್ನು ಡಿ.17, ಶನಿವಾರದಂದು ಆಯೋಜಿಸಲಾಗಿತ್ತು.
ಇಸ್ಕಾನ್ ಸಂಸ್ಥೆಯ ಸಾಕ್ಷಿ ಅಚ್ಚುತದಾಸರವರು, ಚಾರಿತ್ರ್ಯ ಮತ್ತು ಕಾರ್ಯ ಪ್ರಾವೀಣ್ಯತೆ ಯಶಸ್ಸಿನ ಮೂಲ. ಧರ್ಮಕ್ಕೆ ಯಾವಾಗಲೂ ಜಯ ಎನ್ನುವ ಹಲವಾರು ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ನೀತಿ ಕಥೆಗಳ ಮೂಲಕ ಮನಮುಟ್ಟುವಂತೆ ವಿವರಿಸಿದರು. ವಿದ್ಯಾರ್ಥಿಗಳಿಗೆ ಮೌಲ್ಯಗಳ ಅರಿವನ್ನು ಹೆಚ್ಚಿಸುವ ಸಲುವಾಗಿ ಭಗವದ್ಗೀತೆಯ ಬಗ್ಗೆ ಇರುವ ವ್ಯಾಲ್ಯೂಸ್ ಒಲಂಪಿಯಾಡ್ ಎನ್ನುವ ಹೊಸ ಬಗೆಯ ಆನ್ಲೈನ್ ಪರೀಕ್ಷೆ ಬಗ್ಗೆ ವಿವರಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ್ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.