Slide
Slide
Slide
previous arrow
next arrow

ಲಯನ್ಸ್ ಶಾಲೆಯಲ್ಲಿ ಯಕ್ಷಗಾನ ಪ್ರದರ್ಶನ

300x250 AD

ಶಿರಸಿ: ಸೋಂದಾ ಶಬರ ಸಂಸ್ಥೆಯ ನಾಗರಾಜ್ ಜೋಶಿ ನೇತೃತ್ವದಲ್ಲಿ, ನವದೆಹಲಿಯ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ, ಡಿ.17ರಂದು ನಗರದ ಲಯನ್ಸ್ ಶಾಲೆಯ ಸಭಾಂಗಣದಲ್ಲಿ, “ಶನೇಶ್ವರ ಆಂಜನೇಯ” ಎನ್ನುವ ಯಕ್ಷಗಾನ ಪ್ರದರ್ಶನ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀಪಾದ ಹೆಗಡೆ ಬಾಳೆಗದ್ದೆ, ಮದ್ದಲೆಯಲ್ಲಿ ಶ್ರೀಪತಿ ಹೆಗಡೆ ಕಂಚಿಮನೆ, ಚಂಡೆಯಲ್ಲಿ ಉಮೇಶ ಹೆಗಡೆ ಮಾವಿನಕಟ್ಟಾ, ಮುಮ್ಮೇಳದಲ್ಲಿ ನಾರದನಾಗಿ ಶ್ರೀಧರ ಹೆಗಡೆ ಚಪ್ಪರಮನೆ, ಶನಿಯಾಗಿ ನಿರಂಜನ ಜಾಗ್ನಳ್ಳಿ, ಹನುಮಂತನಾಗಿ ಪ್ರವೀಣ ತಟ್ಟೀಸರ ಪಾಲ್ಗೊಂಡರು. ಶಾಲಾ ಮಕ್ಕಳಿಗೆ ಶಾಲಾ ಅವಧಿಯಲ್ಲೆ ನಮ್ಮ ನೆಲದ ಕಲೆಯಾದ ಯಕ್ಷಗಾನವನ್ನು ಪರಿಚಯಿಸುವ ದೃಷ್ಟಿಕೋನದಲ್ಲಿ ಹಮ್ಮಿಕೊಂಡ ಈ ವಾರಾಂತ್ಯದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು.
ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ್ ಹೆಗಡೆ  ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top