ಕುಮಟಾ: ಅಗ್ರಹಾರದಲ್ಲಿ ಅಷ್ಟಾದಶದ ೧೮ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ‘ಸಂಧ್ಯಾ ದೀವಿಗೆ’ ಪುಸ್ತಕ ಲೋಕಾರ್ಪಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಹೊನ್ನಾವರದ ಅಗ್ರಹಾರದ ಲೀಲಾಗಣಪತಿ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಶಂಭು ಭಟ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಭಾಹಿತ ಕುಟುಂಬ ನಡೆದುಬಂದ ಹಾದಿಯ ಬಗ್ಗೆ ವಿವರಿಸುವ ಜೊತೆಗೆ ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
‘ಸಂಧ್ಯಾ ದೀವಿಗೆ’ ಪುಸ್ತಕ ಲೋಕಾರ್ಪಣೆಗೊಳಿಸಿದ ಡಯಟ್ ಹಿರಿಯ ಉಪನ್ಯಾಸಕ ಜಿ ಎಸ್ ಭಟ್ ಮಾತನಾಡಿ, ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಟ್ಟರೆ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ನಿರ್ಧಿಷ್ಟ ಗುರಿ ತಲುಪಲಾಗುತ್ತದೆ. ಇಂದಿನ ಸ್ಫರ್ಧಾ ಯುಗದಲ್ಲಿ ಪ್ರತಿ ಕ್ಷೇತ್ರದಲ್ಲೂ ಪೈಪೋಟಿ ಜಾಸ್ತಿಯಾಗಿದೆ. ಯಾರೂ ಕಠಿಣ ಪರಿಶ್ರಮ ಪಡುತ್ತಾರೋ ಅವರು ಸಾಧನೆ ಮಾಡುತ್ತಾರೆ ಎಂದರು.
ಕಾರ್ಯಕ್ರಮದ ಸಂಯೋಜಕ ಜಿ.ಜಿ.ಸಭಾಹಿತ್ ಮಾತನಾಡಿ, ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿಸಿದರು.
ಅತಿಥಿಯಾಗಿ ಪಾಲ್ಗೊಂಡ ಎಸ್ ಕೆಪಿ ಸತ್ಯಸಾಯಿ ಪಿಯು ಕಾಲೇಜ್ ಪ್ರಾಚಾರ್ಯ ವಿ.ಎನ್.ಭಟ್, ಪ್ರಮುಖರಾದ ಕೆ.ವಿ.ಹೆಗಡೆ, ವಿದ್ವಾನ್ ನೀಲಕಂಠ ಯಾಜಿ ಮತ್ತು ಎಸ್.ಭಟ್ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಅಜಿತ್ ನಾಯ್ಕ, ಪುಷ್ಪ ನಾಯ್ಕ, ದೀಪಕ ನಾಯ್ಕ, ಪಿ.ಸಿ.ನಾಯ್ಕ ಇತರರು ಇದ್ದರು. ಡಾ.ಜಿ.ಜಿ.ಸಭಾಹಿತ್ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಮಹೇಶ ಶೆಟ್ಟಿ ವಂದಿಸಿದರು.