Slide
Slide
Slide
previous arrow
next arrow

ಔಡಾಳ ಶಾಲೆಗೆ ಆಟದ ಪರಿಕರ ಕೊಡುಗೆ

300x250 AD

ಶಿರಸಿ: ಆಳ್ವಾ ಫೌಂಡೇಶನ್ ವತಿಯಿಂದ ನಂದನ ನಿಲೇಕಣಿ ಇವರ ಕುಟುಂಬದ ಪ್ರಾಯೋಜಕತ್ವದಲ್ಲಿ ತಾಲೂಕಿನ ಔಡಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆಟದ ಪರಿಕರಗಳನ್ನು ಕೊಡುಗೆಯಾಗಿ ನೀಡಿದ್ದು, ಆಳ್ವಾ ಫೌಂಡೇಶನ್ ಟ್ರಸ್ಟಿ ನಿವೇದಿತ್ ಆಳ್ವಾ ಮತ್ತು ನಂದನ ನಿಲೇಕಣಿ ಅವರ ಕುಟುಂಬದ ವತಿಯಿಂದ ಜಯದೇವ ನಿಲೇಕಣಿ ಉದ್ಘಾಟಿಸಿದರು.
ಆಳ್ವಾ ಫೌಂಡೇಶನ್‌ನ ನಿವೇದಿತ್ ಆಳ್ವಾ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಅಭಿವೃದ್ಧಿ ಮಾಡಲು ಈ ತರಹ ಹಳ್ಳಿಯ ಶಾಲೆಗಳ ಅಭಿವೃದ್ಧಿ ಬಹಳ ಪ್ರಮುಖ ಪಾತ್ರವಹಿಸುತ್ತದೆ. ಇದರಿಂದ ಮಕ್ಕಳಿಗೆ ಖುಷಿಯಿಂದ ವಿದ್ಯಾಭ್ಯಾಸದ ಜೊತೆಯಲ್ಲಿ ಆಟವಾಡಲು ಮಕ್ಕಳಿಗೆ ಇಂತಹ ಆಟೋಪಕರಣಗಳು ಅವಶ್ಯಕವಾಗಿದೆ. ಕಳೆದ ವರ್ಷದಿಂದ 38 ಸರಕಾರಿ ಶಾಲೆಗಳಿಗೆ ಆಳ್ವ ಫೌಂಡೇಶನ್ ಮತ್ತು ನಂದನ ನಿಲೇಕಣಿ ಇವರ ಕುಟುಂಬದ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಆಟೋಪಕರಣಗಳು ಶಾಲೆಗಳಿಗೆ ವಿತರಿಸಲಾಗಿದೆ ಎಂದು ಹೇಳಿದರು.
ಜಯದೇವ ನಿಲೇಕಣಿ ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳಿಗೆ ಅದರಲ್ಲಿಯು ಈ ತರಹ ಶಿರಸಿಯಿಂದ 28ಕಿ.ಮೀ. ದೂರದಲ್ಲಿರುವ ಶಾಲೆಗಳಿಗೆ ಈ ತರಹದ ಆಟೋಪಕರಣ ನೀಡಿದರಿಂದ ಮಕ್ಕಳಿಗೆ ಶಾಲೆಗೆ ಬರುವ ಆಸಕ್ತಿ ಹೆಚ್ಚುತ್ತದೆ. ನಗರದಂತಹ ಶಾಲೆಗಳಲ್ಲಿ ಮಾತ್ರ ಈ ತರಹದ ಆಟೋಪಕರಣಗಳು ನೋಡುತ್ತಿದ್ದೆವು. ಆದರೆ ಆಳ್ವ ಫೌಂಡೇಶನ್ ಮತ್ತು ನಂದನ ನಿಲೇಕಣಿ ಇವರ ಕುಟುಂಬದ ವತಿಯಿಂದ ಈ ತರಹದ ಆಟೋಪಕರಣ ಹಳ್ಳಿಯ ಸರಕಾರಿ ಶಾಲೆಗಳಿಗೆ ನೀಡಿ ಅದರ ಅಭಿವೃದ್ಧಿಪಡಿಸುವುದು ನಮ್ಮ ಸದುದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ವಕೀಲರಾದ ಸತೀಶ ನಾಯ್ಕ, ಸೋಂದಾ ಗ್ರಾಮ ಪಂಚಾಯತಿ ಸದಸ್ಯರಾದ ಭಾರತಿ, ಬಾಲು ಹೆಗಡೆ, ಕಾಸಿಂ ಸಾಬ, ಗ್ರಾಮ ಪಂಚಾಯತ ಸದಸ್ಯ ಪೂಜಾರಿ, ನಾಗರಾಜ ಮಡಿವಾಳ, ಗೀತಾ ಭೋವಿ, ಚಂದ್ರಕಾoತ ಪವಾರ ಮತ್ತು ಊರ ಹಿರಿಯರು, ಶಾಲಾ ಎಸ್‌ಡಿಎಮ್‌ಸಿ ಅಧ್ಯಕ್ಷರು, ಶಾಲಾ ಶಿಕ್ಷಕ ವೃಂದ ಹಾಗೂ ಮಕ್ಕಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top