Slide
Slide
Slide
previous arrow
next arrow

ಸಚಿವ ಶ್ರೀರಾಮುಲು ಕಾರ್ಯಕ್ರಮ: ಅನುಮಾನಗಳಿಗೆ ಎಡೆಮಾಡಿಕೊಟ್ಟ ಶಿವರಾಮ್ ಹೆಬ್ಬಾರ್ ಅನುಪಸ್ಥಿತಿ

300x250 AD

ಕಾರವಾರ: ಯಲ್ಲಾಪುರ ತಾಲೂಕಿನಲ್ಲಿ ನಡೆದ ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಶ್ರೀರಾಮುಲು ಅವರ ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅನುಪಸ್ಥಿತಿ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸ್ವಂತ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿಯೇ ಹೆಬ್ಬಾರ್ ಆಗಮಿಸದಿರಲು ಕಾರಣ ಏನು ಅನ್ನುವ ಚರ್ಚೆ ಇದೀಗ ಕ್ಷೇತ್ರದಲ್ಲಿ ನಡೆದಿದೆ.
ಗುರುವಾರ ಮಾಗೇಡ್ ಗ್ರಾಮದ ಗಣಪತಿ ಸಿದ್ಧಿ ಎನ್ನುವವರ ಮನೆಯಲ್ಲಿ ವಾಸ್ತವ್ಯ ಹೂಡಲು ಸಚಿವ ಶ್ರೀರಾಮುಲು ಆಗಮಿಸಿದ್ದರು. ಗುರುವಾರ ರಾತ್ರಿ ರಾಮುಲು ಆವರಿಗೆ ಸಿದ್ಧಿ ಜನರು ಭವ್ಯ ಸ್ವಾಗತ ಮಾಡಿಕೊಂಡು ಕಾರ್ಯಕ್ರಮ ಸಹ ಆಯೋಜನೆ ಮಾಡಲಾಗಿತ್ತು. ಇನ್ನು ಶುಕ್ರವಾರ ಬೆಳಿಗ್ಗೆಯಿಂದ ಮಾಗೋಡ ಗ್ರಾಮದಲ್ಲಿ ಕಾರ್ಯಕ್ರಮ ನಡೆದಿದ್ದು ಸಿದ್ಧಿ ಜನರ ಜೊತೆ ಚರ್ಚೆ, ಇಲಾಖೆಯಿಂದ ಸಬ್ಸಿಡಿ ದರದಲ್ಲಿ ವಾಹನ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮ ಮಧ್ಯಾಹ್ನ 3.30 ರವರೆಗೆ ನಡೆದಿತ್ತು. ಇಷ್ಟು ದಿನಗಳ ಕಾಲ ತನ್ನ ಕ್ಷೇತ್ರಕ್ಕೆ ಯಾರೇ ಸಚಿವರು ಆಗಮಿಸಿದರು ಕ್ಷೇತ್ರದ ಶಾಸಕ ಹಾಗೂ ಕಾರ್ಮಿಕ ಸಚಿವ ಆಗಿರುವ ಶಿವರಾಮ್ ಹೆಬ್ಬಾರ್ ತಾನೇ ಉಸ್ತುವಾರಿ ತೆಗೆದುಕೊಳ್ಳುತ್ತಿದ್ದರು. ಜಿಲ್ಲೆಯಲ್ಲಿ ಬೇರೆ ಸಚಿವರು ಆಗಮಿಸಿದರು ಸಹ ಹೆಬ್ಬಾರ್ ತಾನೇ ಮುಂದಾಳತ್ವ ತೆಗೆದುಕೊಳ್ಳುತ್ತಿದ್ದರು. ಆದರೆ ಯಲ್ಲಾಪುರದಲ್ಲಿ ಸರ್ಕಾರದ ಪ್ರಭಾವಿ ಸಚಿವ ಶ್ರೀರಾಮುಲು ಆಗಮಿಸಿದರು ಹೆಬ್ಬಾರ್ ಮಾತ್ರ ಕಾರ್ಯಕ್ರಮಕ್ಕೆ ಆಗಮಿಸಿಲ್ಲ.
ಹೆಬ್ಬಾರ್ ಆಪ್ತರು ಹೇಳುವ ಪ್ರಕಾರ ಅವರಿಗೆ ಮೊದಲೇ ಕಾರ್ಯಕ್ರಮ ನಿಗದಿಯಾಗಿದ್ದು, ಅಲ್ಲದೇ ರಾಮುಲು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಸಹ ಒಂದು ದಿನ ತಡವಾಗಿ ಆದ ಹಿನ್ನಲೆಯಲ್ಲಿ ಆಗಮಿಸಿಲ್ಲ ಎನ್ನಲಾಗುತ್ತಿದೆ. ಆದರೆ ಬಿಜೆಪಿಯಲ್ಲಿ ಕ್ಷೇತ್ರದಲ್ಲಿ ಎರಡು ಗುಂಪಾದ0ತಾಗಿದ್ದು ಒಂದು ಗುಂಪು ಈ ಕಾರ್ಯಕ್ರಮ ಆಯೋಜನೆ ಮಾಡಿದ ಹಿನ್ನಲೆಯಲ್ಲಿ ಹೆಬ್ಬಾರ್ ಆಗಮಿಸಿಲ್ಲ ಎನ್ನುವ ಚರ್ಚೆ ನಡೆದಿದೆ. ಸಚಿವ ಶ್ರೀರಾಮುಲು ಅವರ ಸಂಪೂರ್ಣ ಕಾರ್ಯಕ್ರಮದ ಉಸ್ತುವಾರಿಯನ್ನ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ತೆಗೆದುಕೊಂಡಿದ್ದರು. ಈ ಕಾರ್ಯಕ್ರದ ಆಯೋಜನೆ ಸಹ ಶಾಂತಾರಾಮ ಸಿದ್ಧಿ ಸೇರಿದಂತೆ ಕೆಲ ಮೂಲ ಬಿಜೆಪಿಗರು ಮಾಡಿರುವುದು ಎನ್ನಲಾಗಿತ್ತು. ಹೆಬ್ಬಾರ್ ಗೆ ತಿಳಿಯದೇ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಹೆಬ್ಬಾರ್ ಅವರ ಬೇಸರಕ್ಕೆ ಕಾರಣವಾಗಿದ್ದು ಇದೇ ಕಾರಣಕ್ಕೆ ಅವರು ಆಗಮಿಸಿಲ್ಲ ಎನ್ನುವ ಚರ್ಚೆ ನಡೆದಿದೆ.
ಸದ್ಯ ಚುನಾವಣಾ ವರ್ಷವಾಗಿದ್ದು, ಕ್ಷೇತ್ರದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು ತಪ್ಪಿಸಿಕೊಳ್ಳುವುದಿಲ್ಲ. ಅದರಲ್ಲೂ ಸಿದ್ಧಿ ಜನರ ಮತ ಕ್ಷೇತ್ರದಲ್ಲಿ ಹೆಚ್ಚಿದ್ದು ಸರ್ಕಾರದ ಪ್ರಭಾವಿ ಸಚಿವರು ಸಿದ್ದಿಗಳ ಜೊತೆ ವಾಸ್ತವ್ಯ ಹೂಡಲು ಆಗಮಿಸುವುದು ಸ್ಥಳೀಯ ಶಾಸಕರಿಗೆ ಕ್ರೆಡಿಟ್ ಸಿಗಲಿದೆ. ಆದರೂ ಹೆಬ್ಬಾರ್ ಮಾತ್ರ ಬೇರೆ ಕಾರ್ಯಕ್ರಮ ನಿಗಧಿ ಎನ್ನುವ ಕಾರಣ ನೀಡಿ ಆಗಮಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇನ್ನು ಯಲ್ಲಾಪುರ ಕ್ಷೇತ್ರಕ್ಕೆ ಯಾವುದೇ ಸಚಿವರುಗಳು ಆಗಮಿಸಿದರೇ ಹೆಬ್ಬಾರ್ ಅವರ ಆಪ್ತ ವಲಯ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಶ್ರೀರಾಮುಲು ಅವರ ಕಾರ್ಯಕ್ರಮದಲ್ಲಿ ಹೆಬ್ಬಾರ್ ಆಪ್ತ ವಲಯವೂ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು ಇದು ಯಾವೆಲ್ಲ ಬೆಳವಣಿಗೆಗೆ ಕಾರಣವಾಗಲಿದೆ ಎನ್ನುವುದು ಕಾದು ನೋಡಬೇಕಾಗಿದೆ.

300x250 AD
Share This
300x250 AD
300x250 AD
300x250 AD
Back to top