Slide
Slide
Slide
previous arrow
next arrow

ಸೇತುವೆಯ ಸಂಪರ್ಕ ರಸ್ತೆ ಕಾಮಗಾರಿ ಪರಿಶೀಲಿಸಿದ ಶಾಸಕ ದಿನಕರ ಶೆಟ್ಟಿ

300x250 AD

ಕುಮಟಾ: ತಾಲೂಕಿನ ಕೋಡ್ಕಣಿ- ಐಗಳಕುರ್ವೆ ಸೇತುವೆಯ ಸಂಪರ್ಕ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಶಾಸಕ ದಿನಕರ ಶೆಟ್ಟಿ ಅವರು ಸ್ಥಳಕ್ಕೆ ತೆರಳಿ ಕಾಮಗಾರಿ ಪರಿಶೀಲಿಸಿದರು.
ತಾಲೂಕಿನ ಕೋಡ್ಕಣಿ ಸೇತುವೆ ಕಾಮಗಾರಿ ಮುಗಿದು ಎರಡು ವರ್ಷಗಳು ಗತಿಸಿದ್ದರೂ ಸಂಪರ್ಕ ರಸ್ತೆ ನಿರ್ಮಾಣವಾಗದೆ ಅಲ್ಲಿನ ಜನರು ಪರದಾಡುವಂತಾಗಿತ್ತು. ಸಂಪರ್ಕ ರಸ್ತೆ ನಿಮಾರ್ಣಕ್ಕೆ ಸ್ಥಳೀಯ ಜನರ ಜಾಗದ ಸಮಸ್ಯೆ ಎದುರಾಗಿತ್ತು. ಭೂಸ್ವಾಧೀನ ಕ್ಕೆ ಒಪ್ಪಿಗೆ ಸಿಗದೇ ವಿಳಂಬವಾಗಿತ್ತು. ಈ ಸಂಬಂಧ ಶಾಸಕ ದಿನಕರ ಶೆಟ್ಟಿ ಅವರು ಅಧಿವೇಶನದಲ್ಲೂ ಎರಡು ಬಾರಿ ಪ್ರಸ್ತಾಪ ಮಾಡಿದ್ದರು. ಬಳಿಕ ಸಹಾಯಕ ಆಯುಕ್ತ ರಾಘವೇಂದ್ರ ಜಗಲಾಸರ, ತಹಶೀಲ್ದಾರ್ ವಿವೇಕ ಶೇಣ್ವಿ ಹಾಗೂ ಇತರ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜೊತೆ ಸತತ ಎರಡು ಬಾರಿ ಸಭೆ ನಡೆಸಿ ಅಲ್ಲಿಯ ಜಾಗದ ಸಮಸ್ಯೆ ಬಗೆಹರಿಸುವಲ್ಲಿ ಶ್ರಮ ವಹಿಸಿದ್ದರು. ಪರಿಣಾಮ ಅಗತ್ಯ ಅನುದಾನವನ್ನು ಕೂಡ ಸರ್ಕಾರದಿಂದ ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿ ಈಗಾಗಲೇ ಕಾಮಗಾರಿ ವೇಗದಿಂದ ಸಾಗಿದೆ. ಇಂದು ಶಾಸಕರು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ತೆರಳಿ ಕಾಮಗಾರಿ ಪರಿಶೀಲಿಸಿ, ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಶೀಘ್ರ ಮುಗಿಸಿಕೊಡಿ ಎಂದು ಸೂಚಿಸಿದರು.
ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಶಾಸಕ ಶೆಟ್ಟಿ, ಈ ಸೇತುವೆ ಕಾಮಗಾರಿ ಮಂಜೂರಿ ಮಾಡಿಸಿದ್ದು ಕಾಂಗ್ರೆಸ್ ಸರ್ಕಾರವಾದರೂ ಈ ಕಾಮಗಾರಿಗೆ ಅಗತ್ಯವಾದ ಎಲ್ಲ ಅನುದಾನವನ್ನು ನಮ್ಮ ಬಿಜೆಪಿ ಸರ್ಕಾರದ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನವರು ಹಾಗೂ ಈಗೀನ ಮುಖ್ಯಮಂತ್ರಿ ಬೊಮ್ಮಾಯಿ ಯವರು ಬಿಡುಗಡೆಗೊಳಿಸಿ, ಸೇತುವೆ ನಿರ್ಮಾಣ ಮಾಡುವಲ್ಲಿ ನೆರವಾಗಿದ್ದಾರೆ. ಕರೋನಾ ಸಂದರ್ಭದಲ್ಲಿ ಎರಡು ವರ್ಷ ಸ್ವಲ್ಪ ವಿಳಂಬವಾಯಿತು. ಸಂಪರ್ಕ ರಸ್ತೆಗೆ ಭೂಸ್ವಾಧೀನ ಕೂಡ ಆಗಿರಲಿಲ್ಲ. ನಾನು ಎರಡು ಬಾರಿ ಅಧಿವೇಶನದಲ್ಲೂ ಇದರ ಪ್ರಸ್ತಾಪ ಮಾಡಿದ್ದೆ. ನಂತರ ಭೂ ಸ್ವಾಧೀನ ಮಾಡಿ ಕೂಡಲೇ ಕಾಮಗಾರಿ ಪ್ರಾರಂಭ ಮಾಡುವ ಉದ್ದೇಶದಿಂದ ಎರಡು ಬಾರಿ ಅಧಿಕಾರಿಗಳ ಸಭೆ ನಡೆಸಿ ಭೂಸ್ವಾಧೀನವನ್ನು ಮಾಡಿಕೊಂಡು ಬೇಕಾಗಿರುವ ಅನುದಾನ ಕೂಡ ಸರ್ಕಾರದಿಂದ ಬಿಡುಗಡೆಗೊಳಿಸಿ, ಈಗ ವೇಗವಾಗಿ ಕಾಮಗಾರಿ ಆರಂಭವಾಗಿದೆ ಜನವರಿ ಕೊನೆ ಅಥವಾ ಫೇಬ್ರುವರಿ ಮೊದಲ ವಾರದಲ್ಲಿ ಜನರ ಓಡಾಟಕ್ಕೆ ಸೇತುವೆ ತೆರೆದುಕೊಳ್ಳುವ ನಿರೀಕ್ಷೆ ಇದೆ ಎಂದರು.
ಈ ಸಂದರ್ಭದಲ್ಲಿ ಕೋಡ್ಕಣಿಯ ಉಲ್ಲಾಸ ನಾಯ್ಕ, ಸುನಿಲ್ ನಾಯ್ಕ, ಮಹಾದೇವ ಪಟಗಾರ, ದತ್ತು ಅಂಬಿಗ ಹಾಗೂ ಇತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top