ಶಿರಸಿ: ಕೆ.ಎಸ್.ಹೆಗ್ಡೆೆ ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು, ಕದಂಬ ಫೌಂಡೇಶನ್ ಶಿರಸಿ, ಹುಳಗೋಳ ಸೇವಾ ಸಹಕಾರಿ ಸಂಘ ನಿಯಮಿತ ಭೈರುಂಬೆ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಡಿ. 11, ರವಿವಾರದಂದು ಭೈರುಂಬೆ ಸೊಸೈಟಿಯಲ್ಲಿ ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 1.00 ರವರೆಗೆ ನಡೆಯಲಿದೆ.
ಈ ಶಿಬಿರದಲ್ಲಿ ಜನರಲ್ ಮೆಡಿಸನ್, ಚರ್ಮರೋಗ, ಮಕ್ಕಳ ಚಿಕಿತ್ಸೆ, ಶ್ವಾಸಕೋಶ ಸಂಬಂಧಿ ಖಾಯಿಲೆ, ಹೃದಯರೋಗ, ಎಲುಬು ಮತ್ತು ಮೂಳೆರೋಗ, ಕ್ಯಾನ್ಸರ್, ಹರ್ನಿಯಾ, ಥೈರಾಯಿಡ್, ಮೂಲವ್ಯಾಧಿ, ಹೊಟ್ಟೆ ಸಂಬಂಧಿ ಕಾಯಿಲೆಯ ತಪಾಸಣೆಯನ್ನು ಉಚಿತವಾಗಿ ಮಾಡಲಾಗುವುದು
ಈ ತಪಾಸಣಾ ಶಿಬಿರದಲ್ಲಿ ಮಕ್ಕಳ ತಜ್ಞರಾದ ಡಾ| ಸೀಮಾ ಪವಮಾನ್, ಶಸ್ತ್ರಚಿಕಿತ್ಸಾ ತಜ್ಞರಾದ ಡಾ| ರೋಹಿತ್ ಹೊಳ್ಳ. ಎಲುಬು ಮತ್ತು ಮೂಳೆ ತಜ್ಞರಾದ ಡಾ| ಅನೂಪ್ ಹೆಗ್ಡೆ, ಚರ್ಮರೋಗ ತಜ್ಞರಾದ ಡಾ| ಸ್ನಿಗ್ಧ ಹೆಗ್ಡೆ, ವೈದ್ಯಕೀಯ ತಜ್ಞರಾದ ಡಾ| ಪೂಜಾಶ್ರೀ ಜೆ, ಇವರ ಜೊತೆ ತಂಡದ ವೈದ್ಯರು ಆರೋಗ್ಯ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಶಿಬಿರದಲ್ಲಿ ರೋಗ ಪತ್ತೆಯಾದಲ್ಲಿ ರೋಗಿಗಳಿಗೆ ಕೆ.ಎಸ್.ಹೆಗ್ದೆ ಆಸ್ಪತ್ರೆಯಲ್ಲಿ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಯನ್ನು ಸರಕಾರದ ನಿಯಮಾವಳಿಗನುಗುಣವಾಗಿ ದೊರಕುವ ಎಲ್ಲಾ ವಿಮಾ ಸೌಲಭ್ಯಗಳೊಂದಿಗೆ ರಿಯಾಯಿತಿ ದರದಲ್ಲಿ ಅಥವಾ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಆಸಕ್ತರು ಈ ವೈದ್ಯಕೀಯ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ಕೋರಿದ್ದಾರೆ. .