ಶಿರಸಿ: ಹುಟ್ಟಿದಾಗಿಂದ ಸಾಯುವವರೆಗೂ ಮನುಷ್ಯನ ಜೀವನದಲ್ಲಿ ಅವನು ಬೇರೆ ಬೇರೆ ರೀತಿಯ ಒತ್ತಡಗಳನ್ನು ಎದುರಿಸುತ್ತಾನೆ. ಅದೇ ಒತ್ತಡ ಮುಂದುವರೆದು ಖಿನ್ನತೆ, ಮತ್ತು ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅತಿಯಾದ ಒತ್ತಡವು ಮೆದುಳಿನ ಮೇಲೆ ಪರಿಣಾಮವನ್ನು ಉಂಟು ಮಾಡುವುದಲ್ಲದೇ ಹಲವಾರು ರಾಸಾಯನಿಕಗಳನ್ನು ಬಿಡುಗಡೆ ಮಾಡಿ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಣಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಿ.ಬಿ ಗಣೇಶ್ ಹೇಳಿದರು.
ಅವರು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಐಕ್ಯುಎಸಿ ಸಂಯೋಜನೆಯಲ್ಲಿ ಪ್ರಾಣಿ ಶಾಸ್ತ್ರ ವಿಭಾಗವು ಆಯೋಜಿಸಿದ್ದ ಜೀವಸಂಕುಲದ ಮೇಲೆ ಒತ್ತಡದ ಪರಿಣಾಮಗಳು ಎಂಬ ವಿಷಯದ ಕುರಿತ ಕಾರ್ಯಗಾರದಲ್ಲಿ ಮಾತನಾಡಿದರು.
ಕೇವಲ ಮನುಷ್ಯ ಮಾತ್ರವಲ್ಲದೆ ಪ್ರತಿಯೊಂದು ಜೀವಸಂಕುಲವೂ ಒತ್ತಡವನ್ನು ಎದುರಿಸುತ್ತವೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಯೋಗಧ್ಯಾನ ರೂಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ಮತ್ತು ಮೊಬೈಲ್ ನಿಂದ ದೂರ ಇರಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜೀವಶಾಸ್ತ್ರ ಸಂರಕ್ಷಣ ಮತ್ತು ಸುಸ್ಥಿರ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಡಾ. ಕೇಶವ್ ಕೊರ್ಸೆ ಮಾತನಾಡಿ ಪ್ರತಿಯೊಂದು ವಿಷಯವನ್ನು ಗಮನಿಸುವ ಶಕ್ತಿ ನಮ್ಮ ಮೆದುಳಿಗೆ ಇದೆ, ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಮಾನಸಿಕ ಶಕ್ತಿಯನ್ನ ಹೆಚ್ಚಿಸಿಕೊಳ್ಳುಬೇಕು, ಖಿನ್ನತೆ, ಆತ್ಮಹತ್ಯೆಯನ್ನು ತಡೆಯಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ ಟಿ.ಎಸ್ ಹಳೆಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ವತ್ತಡ ನಿರ್ವಹಣೆಗೆ ಯೋಗ,ಧ್ಯಾನದ ರೂಢಿಯನ್ನು ಬೆಳೆಸಿಕೊಳ್ಳಿ ಎಂದರು . ಕಾಲೇಜಿನ ಐಕ್ಯೂಎಸ್‌ಸಿ ಸಂಚಾಲಕರಾದ ಡಾ: ಎಸ್ ಎಸ್ ಭಟ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಪ್ರೊ ಅನಿಲ್ ಕುಮಾರ್ ಹೆಗಡೆ ವಂದಿಸಿದರು.ಪ್ರೊ ವರ್ಷಾ ರಾಚೋಟಿ ನಿರೂಪಿಸಿದರು.