ಶಿರಸಿ: ತಾಲೂಕಿನ ಬನವಾಸಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆ್ಯಂಟಿ ಡ್ರಗ್ ಕ್ಲಬ್ ರಚಿಸಿ ಉದ್ಘಾಟಿಸಲಾಯಿತು. ಪ್ರಾಚಾರ್ಯರಾದ ಎಂ.ಕೆ. ನಾಯ್ಕ ಹೊಸಳ್ಳಿ ಕ್ಲಬ್ ಉದ್ಘಾಟಿಸಿ ಮಾತನಾಡುತ್ತಾ ಡ್ರಗ್ಸ್’ಗಳಿಂದ ಆಗುವಂತಹ ಅನಾಹುತ, ಕೆಡಕುಗಳ ಬಗ್ಗೆ ಉದಾಹರಣೆ ಸಹಿತ ವಿವರಿಸಿದರು. ಹಿರಿಯ ಉಪನ್ಯಾಸಕಿ ತನುಜಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ಪ್ರಭಾವತಿ ಹೆಗಡೆ ವಂದಿಸಿದರು. ಎ.ಆರ್.ಪ್ರಕಾಶ, ಶೋಭಾ ಮೊಗೇರ, ನವೀನ್ ಕುಮಾರ್ ಎಂ.ಕೆರೂರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬನವಾಸಿ ಕಾಲೇಜಿನಲ್ಲಿ ಆ್ಯಂಟಿ ಡ್ರಗ್ ಕ್ಲಬ್ ರಚನೆ
