Slide
Slide
Slide
previous arrow
next arrow

ರಾಮತಾರಕನಾಮ ಜಪ ಮಹಾಯಜ್ಞ ಅಭಿಯಾನಕ್ಕೆ ಚಾಲನೆ

300x250 AD

ಹೊನ್ನಾವರ: ತಾಲೂಕಿನ ಕ್ಷೇತ್ರ ಕರ್ಕಿ ಶ್ರೀ ಜ್ಞಾನೇಶ್ವರಿ ಮಂದಿರದಲ್ಲಿ ಫೆಬ್ರವರಿ 5ರಂದು ಜರುಗಲಿರುವ ರಾಮತಾರಕನಾಮ ಜಪ ಮಹಾಯಜ್ಞ ಕಾರ್ಯಕ್ರಮದ ನಿಮಿತ್ತ ತಾಲೂಕಾ ದೈವಜ್ಞ ವಾಹಿನಿ ಹಾಗೂ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಅಭಿಯಾನ ಪ್ರಾರಂಭಿಸಲಾಯಿತು.
ಈ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ವಿಠ್ಠಲ ರುಕ್ಮಿಣಿ ದೇವಸ್ಥಾನದ ಸಭಾಭವನದಲ್ಲಿ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು. ಶ್ರೀ ರಾಮತಾರಕ ಮಹಾ ಯಜ್ಞಕ್ಕೆ ಸಮಾಜದ ಎಲ್ಲರೂ ಸಹಕಾರ ನೀಡಬೇಕು. ಶ್ರೀರಾಮ ಜಯ ರಾಮ ಜಯ ಜಯ ರಾಮ ಈ ಮಹಾ ಮಂತ್ರಕ್ಕೆ ವಿಶೇಷ ಶಕ್ತಿ ಇದೆ. ಮಂತ್ರ ಪಠಣದಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಮನಸ್ಸಿನ ನೆಮ್ಮದಿ, ಸುಖ, ಶಾಂತಿ ನೆಲೆಸುತ್ತದೆ. ಅಷ್ಟೇ ಅಲ್ಲ, ಮೋಕ್ಷ ಪಡೆಯಲು ಸಾಧ್ಯ ಎಂದು ನುಡಿದರು.
ರಾಮತಾರಕನಾಮ ಜಪ ಮಹಾಯಜ್ಞ ಕಾರ್ಯಕ್ರಮದಲ್ಲಿ ಸರ್ವರೂ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕು. ಮೊಬೈಲ್, ಟಿವಿ, ಫೇಸ್ಬುಕ್, ಧಾರವಾಹಿಗೆ ವಿನಿಯೋಗಿಸುವ ಸಮಯವನ್ನು ಈ ಒಳ್ಳೆಯ ಕಾರ್ಯಕ್ಕೆ ವಿನಿಯೋಗಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಧವ ಕೇಶವ ಶೇಟ್, ವಿಠ್ಠಲ ರುಕ್ಮಿಣಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಮಾಧವ ಕೇಶವ ಶೇಟ್, ದೇವಾಲಯದವರು, ಸುತ್ತಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಕಾರ್ಯಕ್ರಮನ್ನು ಚೆಂದಗಾಣಿಸಿ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.

300x250 AD
Share This
300x250 AD
300x250 AD
300x250 AD
Back to top