Slide
Slide
Slide
previous arrow
next arrow

ಡಿ.10, 11ಕ್ಕೆ ಅಂತರಾಷ್ಟ್ರೀಯ ವಾಣಿಜ್ಯ ಸಮ್ಮೇಳನ

300x250 AD

ಹೊನ್ನಾವರ: ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಎಸ್‌.ಡಿ.ಎಮ್ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಡಿ.10 ಮತ್ತು 11ರಂದು 2 ದಿನಗಳ ಅಂತರಾಷ್ಟ್ರೀಯ ವಾಣಿಜ್ಯ ಸಮ್ಮೇಳನ ನಡೆಯಲಿದೆ.
ಎಂ.ಪಿ.ಇ ಸೊಸೈಟಿಯ ವತಿಯಿಂದ ನಡೆಯುತ್ತಿರುವ ಪ್ರಪ್ರಥಮ ಅಂತರಾಷ್ಟ್ರೀಯ ಸಮ್ಮೇಳನ ಇದಾಗಿದೆ. ಹೊಸ ಶಿಕ್ಷಣ ನೀತಿ ಬಂದ ಮೇಲೆ ಶಿಕ್ಷಣದಲ್ಲಿ ಬದಲಾವಣೆ ಆಗುತ್ತಿದೆ. ಅದಕ್ಕೆ ಅನ್ವಯವಾಗುವಂತೆ ಈ ಸಮ್ಮೇಳನವನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ದೇಶ, ವಿದೇಶದ ವಾಣಿಜ್ಯ ವಿಭಾಗದ ಪ್ರತಿನಿಧಿಗಳು ಮತ್ತು ವಾಣಿಜ್ಯ ವಿಭಾಗದ ಪೂರ್ವ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಡಿ.10ರಂದು ನಡೆಯುವ ಮೊದಲ ದಿನದ ಸಮ್ಮೇಳನದ ಉದ್ಘಾಟಕರಾಗಿ ಕೊಂಕಣ ಎಜ್ಯುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮುರುಳಿಧರ ಪ್ರಭು, ದಿಕ್ಸೂಚಿ ಭಾಷಣಕಾರರಾಗಿ ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಸಚಿವ ಡಾ.ಎಂ.ಎಸ್.ಮೂಡಿತ್ತಾಯ, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಎಂ.ಪಿ.ಇ ಸೊಸೈಟಿಯ ಉಪಾಧ್ಯಕ್ಷ ನಾಗರಾಜ ಕಾಮತ್ ಹಾಗೂ ಅಧ್ಯಕ್ಷತೆಯನ್ನು ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ.ವಿಜಯಲಕ್ಷ್ಮಿ ಎಂ. ನಾಯ್ಕ್ ವಹಿಸಿಕೊಳ್ಳಲಿದ್ದಾರೆ. ಮೊದಲ ದಿನದ ತಾಂತ್ರಿಕ ಸೆಷನ್‌ನಲ್ಲಿ “ಬ್ಯುಸಿನೆಸ್ ಎಜ್ಯುಕೇಶನ್ & ಸಸ್ಟೆನೆಬಲ್ ಡೆವಲಪ್‌ಮೆಂಟ್ ಇನ್ ಗ್ಲೋಬಲ್ ಪರ್‌ಸ್ಪೆಕ್ಟೀವ್” ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ದಿಕ್ಸೂಚಿ ಭಾಷಣಕಾರರಾಗಿ ತಮಿಳುನಾಡು ಅಣ್ಣಾಮಲೈ ಯುನಿವರ್ಸಿಟಿಯ ಸಹ ಪ್ರಾಧ್ಯಾಪಕ ಡಾ.ಆರ್.ರಾಮಚಂದ್ರನ್ ನಡೆಸಿಕೊಡಲಿದ್ದಾರೆ. ಎರಡನೇ ಸೆಷನ್ ನಲ್ಲಿ “ಫೈನಾನ್ಶಿಯಲ್ & ಇನ್ಶುರೆನ್ಸ್ ಸರ್ವಿಸಸ್ & ಸಸ್ಟೆನೆಬಲ್ ಡೆವಲಪಮೆಂಟ್ ವಿಚಾರವಾಗಿ ಕೇರಳದ ಸೆಂಟ್ರಲ್ ವಿಶ್ವವಿದ್ಯಾಲಯದ ಪ್ರವಾಸೋದ್ಯಮ ಹಾಗೂ ಬ್ಯುಸಿನೆಸ್ ಸ್ಟಡೀಸ್ ವಿಭಾಗದ ಉಪನ್ಯಾಸಕ ಡಾ.ಟಿ.ಮಲ್ಲಿಕಾರ್ಜುನಪ್ಪ ಹಾಗೂ ಮೂರನೇ ಸೆಷನ್ ನಲ್ಲಿ “ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ – ಗ್ಲೋಬಲ್ & ಇಂಡಿಯನ್ ಪರ್‌ಸ್ಪೆಕ್ಟೀವ್ ” ಎಂಬ ವಿಚಾರವಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಉಪನ್ಯಾಸಕಿ ಡಾ.ಅಂಜನಾದೇವಿ ಎನ್. ತಾಮ್ರಗುಂಡಿ ಉಪನ್ಯಾಸ ನೀಡಲಿದ್ದಾರೆ.
ಎರಡನೇ ದಿನದ ಸಮ್ಮೇಳನದಲ್ಲಿ “ಜಪಾನಿಸ್ & ಅಮೇರಿಕನ್ ಮ್ಯಾನೆಜ್‌ಮೆಂಟ್ ಸ್ಟ್ರಾಟರ್ಜಿ ಫಾರ್ ಸ್ಟಾರ್ಟಪ್ಸ್” ವಿಚಾರವಾಗಿ ಬೆಂಗಳೂರಿನ ಲರ್ನ್ಎಕ್ಸ್ ಕನ್ಸಲ್ಟಿಂಗ್ ಪ್ರೈ.ಲಿ.ನ ಸಿಇಒ ಮಹೇಶ್ ಹೆಗಡೆ ಮತ್ತು ಎರಡನೇ ಸೆಷನ್ ನಲ್ಲಿ “ಎಂಟರ್‌ಪ್ರಿನರ್‌ಶಿಪ್ ಡೆವಲಪ್‌ಮೆಂಟ್ & ಸಸ್ಟೆನೆಬಲ್ ಡೆವಲಪ್‌ಮೆಂಟ್ ಇನ್ ಗ್ಲೋಬಲ್ ಪರ್‌ಸ್ಪೆಕ್ಟೀವ್” ವಿಷಯವಾಗಿ ನಿಟ್ಟೆ ಕೆ.ಎಸ್.ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ಉಪನ್ಯಾಸಕ ಮತ್ತು ಕಾರ್ಪೋರೇಟರ್ ಡಾ.ಸುಧೀರ್‌ರಾಜ್ ಕೆ. ಮಾತನಾಡಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಎಂ.ಪಿ.ಇ ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಹಾಗೂ ಸಭಾಧ್ಯಕ್ಷರಾಗಿ ಡಾ.ವಿಜಯಲಕ್ಷ್ಮಿ ಎಂ. ನಾಯ್ಕ ಭಾಗವಹಿಸಲಿದ್ದಾರೆ. ದುಬೈ, ಆಸ್ಟ್ರೇಲಿಯಾ, ಮಸ್ಕತ್‌ನಿಂದ ಆನ್‌ಲೈನ್‌ನಲ್ಲಿ ಭಾಗವಹಿಸಲಿದ್ದಾರೆ. ಇನ್ನು ರಾಜ್ಯದ ಹಲವು ಜಿಲ್ಲೆಗಳಿಂದ ವಿವಿಧ ಕಾಲೇಜಿನ ಉಪನ್ಯಾಸಕರು ಭಾಗವಹಿಸಲಿದ್ದಾರೆ.

300x250 AD
Share This
300x250 AD
300x250 AD
300x250 AD
Back to top