ಸಿದ್ಧಾಪುರ: ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಯುವ ವೇದಿಕೆಯ ಸಿದ್ಧಾಪುರ ಘಟಕದ ಆಶ್ರಯದಲ್ಲಿ ದೊಡ್ಮನೆ ಗ್ರಾಮ ಪಂಚಾಯತ ವ್ಯಾಪ್ತಿಯ ಕೋಡಿಗದ್ದೆಯಲ್ಲಿ ನವೆಂಬರ್ 23, ಮಧ್ಯಾಹ್ನ 3 ಗಂಟೆಗೆ ಶಂಭುಲಿಂಗೇಶ್ವರ ಮಹಿಷಾಸುರ ಮರ್ದಿನಿ ದೇವಾಲಯದಲ್ಲಿ ಚಿಂತನ ಸಭೆ ಸಂಘಟಿಸಲು ನಿರ್ಧರಿಸಲಾಗಿದೆ ಎಂದು ಯುವ ವೇದಿಕೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆ ಮತ್ತು ವಿಷಯ ಮಂಡನೆಯನ್ನು ಕ್ಯಾದಗಿ ವಲಯ ಅರಣ್ಯ ಅಧಿಕಾರಿ ಅಜಯ್ ಕುಮಾರ್ ಮಾಡುವರು. ವಿಶೇಷ ಆಮಂತ್ರಿತರಾಗಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಆಗಮಿಸುವರು. ಮುಖ್ಯ ಅತಿಥಿಗಳಾಗಿ ಬಿಎಸ್ಎನ್ಡಿಪಿ ತಾಲೂಕ ಘಟಕ ಸಿದ್ಧಾಪುರ ಅಧ್ಯಕ್ಷ ವಿನಾಯಕ ಆರ್. ನಾಯ್ಕ , ವಸಂತ ನಾಯ್ಕ, ಸುಬ್ರಾಯ ಭಟ್ಟ ಗಡಿಹಿತ್ಲು, ಸಾಮಾಜಿಕ ಹೋರಾಟಗಾರ ಶ್ರೀಧರ ಭಟ್ಟ ಗಡಿಹಿತ್ಲು , ಕೋಡಿಗದ್ದೆ ವಲಯ ಫಾರೆಸ್ಟ ಆಫೀಸರ್ ಶ್ರೀಕಾಂತ,ಕೋಡಿಗದ್ದೆ ವಲಯ ಫಾರೆಸ್ಟ ಗಾರ್ಡ ಇಸ್ಮಾಯಿಲ್ ಇವರುಗಳು ಆಗಮಿಸುವರು.
ಅರಣ್ಯವಾಸಿಗಳಿಗೆ ಭೂಮಿ ಹಕ್ಕಿನ ಕುರಿತು ತಿಳುವಳಿಕೆ, ಜಾಗೃತೆ, ಮಾಹಿತಿ ನೀಡುವ ಜೊತೆಗೆ ಅರಣ್ಯ ರಕ್ಷಿಸುವಲ್ಲಿ ಅರಣ್ಯವಾಸಿಗಳ ಜವಾಬ್ದಾರಿ ಕುರಿತು ಜಾಗೃತೆ ಮೂಡಿಸುವ ಉದ್ದೇಶದಿಂದ ಚಿಂತನ ಸಭೆ ಸಂಘಟಿಸಲಾಗಿದ್ದು ಇರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯ ಅತಿಕ್ರಮಣದಾರರು ಆಗಮಿಸಬೇಕೆಂದು ಕಾರ್ಯಕ್ರಮದ ಸಂಯೋಜಕರಾದ ನಾಗರಾಜ ಎಲ್ ಮರಾಠಿ, ಧನಂಜಯ ಎಸ್ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.