ಹಳಿಯಾಳ: ರೈತರು ಕಬ್ಬು ಕಟಾವು ಮಾಡಲು ಬರುವವರಿಗೆ ಹಣವನ್ನು ನೀಡಬಾರದೆಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಕುಮಾರ್ ಬೋಬಾಟಿ ತಿಳಿಸಿದ್ದಾರೆ.
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸುದೀರ್ಘವಾದ 45 ದಿನಗಳ ಕಬ್ಬು ಬೆಳೆಗಾರರ ಹೋರಾಟವನ್ನು ಕಬ್ಬು ಬೆಳೆಗಾರರ ಸರ್ವ ಸಹಕಾರದಲ್ಲಿ ಕೈಗೊಳ್ಳಲಾಗಿದೆ. ಹೋರಾಟಕ್ಕೆ ಮಣಿದು ಕಬ್ಬಿನ ದರವನ್ನು ಏರಿಕೆ ಮಾಡಲಾದರೂ, ಬೇಡಿಕೆಯಂತೆ ಏರಿಕೆಯಾಗಿಲ್ಲ. ಹಾಗೂ ನಮ್ಮ ವ ಇವಿಧ ಬೇಡಿಕೆಗಳು ಸಹ ಪೂರ್ಣ ಪ್ರಮಾಣದಲ್ಲಿ ಇನ್ನೂ ಈಡೇರಿಕೆಯಾಗಿಲ್ಲ, ಈ ನಡುವೆ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಅವಕಾಶವನ್ನು ನೀಡಲಾಗಿದೆ. ಮೊದಲೆ ನಮಗೆ ನಾವು ಬೆಳೆದ ಕಬ್ಬಿಗೆ ನ್ಯಾಯೋಚಿತವಾದ ದರ ಇಲ್ಲದೇ ಇರುವುದರಿಂದ, ಕಬ್ಬು ಕಟಾವು ಮತ್ತು ಸಾಗಾಣಿಕೆಯ ವೆಚ್ಚವನ್ನು ಮುರಿದುಕೊಂಡೆ ರೈತರಿಂದ ಕಬ್ಬನ್ನು ಸಕ್ಕರೆ ಕಾರ್ಖಾನೆ ಖರೀದಿಸುತ್ತಿರುವುದರಿಂದ ಯಾವುದೇ ಕಾರಣಕ್ಕೂ ಹಣ ನೀಡಬಾರದು ಎಂದು ತಿಳಿಸಿದ್ದಾರೆ.