Slide
Slide
Slide
previous arrow
next arrow

ವಿಜೃಂಭಣೆಯಿಂದ ಶೆಜ್ಜೇಶ್ವರ ಕಾರ್ತಿಕೋತ್ಸವ ಸಂಪನ್ನ

300x250 AD

ಕಾರವಾರ: ತಾಲೂಕಿನ ಶೇಜವಾಡದ ಶ್ರೀ ಶೆಜ್ಜೇಶ್ವರ ದೇವಸ್ಥಾನದಲ್ಲಿ ನ.9 ಹಾಗೂ 10 ರಂದು ಕಾರ್ತಿಕೋತ್ಸವವು ವಿಜೃಂಭಣೆಯಿಂದ ನೆರವೇರಿತು.
ನ.9 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಶ್ರೀ ಶೆಜ್ಜೇಶ್ವರ ದೇವಸ್ಥಾನದ ಆವರಣದಲ್ಲಿ ಭಕ್ತರಿಗಾಗಿ ತುಲಾಭಾರ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ರೂಪಾಲಿ ನಾಯ್ಕ ಅವರು ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಚಿವರನ್ನು ಹಾಗೂ ಶಾಸಕಿಯನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು. ಪುರಾತನ ಇತಿಹಾಸವನ್ನು ಹೊಂದಿರುವ ಶ್ರೀ ಶೆಜ್ಜೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಯೋಜನೆ ರೂಪಿಸಿರುವ ಬಗ್ಗೆ ಮಾಹಿತಿ ಪಡೆದ ಸಚಿವರು ಸರಕಾರದಿಂದ ಅನುದಾನ ಒದಗಿಸುವ ಭರವಸೆ ನೀಡಿದರು.
ನ.10 ರಂದು ಬೆಳಿಗ್ಗೆಯಿಂದ ಶ್ರೀ ದೇವರಿಗೆ ಧಾತ್ರಿ ಹೋಮ, ಮಹಾಪೂಜೆ ನಡೆದು ಬಳಿಕ ಶ್ರೀ ದೇವರ ಪಲ್ಲಕ್ಕಿಯು ಸಮೀಪದ ವನಕ್ಕೆ ತೆರಳಿ ಅಲ್ಲಿ ಪೂಜೆ ನಡೆಯಿತು. ವನಭೋಜನ ನಿಮಿತ್ತ ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿತು. ಸಂಜೆ 6 ಗಂಟೆಗೆ ಪಲ್ಲಕ್ಕಿಯು ವನದಿಂದ ಮರಳಿ ಹೊರಟು ದೇವಸ್ಥಾನದ ಬಳಿ ಆಗಮಿಸಿ ಪೂಜೆಯ ಬಳಿಕ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ನೆರೆದ ನೂರಾರು ಜನರು ದೀಪಗಳನ್ನು ಬೆಳಗಿದರು. ಬಳಿಕ ಪಲ್ಲಕ್ಕಿಯು ಸ್ಥಳೀಯ ಬೀದಿಗಳಲ್ಲಿ ಸಂಚರಿಸಿ ಕೆರೆಗೆ ಆಗಮಿಸಿತು. ಬಳಿಕ ಕೆರೆಯಲ್ಲಿ ಶ್ರೀ ಶೆಜ್ಜೇಶ್ವರ ದೇವರ ತೆಪ್ಪೋತ್ಸವವು ಅದ್ಧೂರಿಯಾಗಿ ನಡೆಯಿತು. ಬಳಿಕ ಪಲ್ಲಕ್ಕಿಯು ಮರಳಿ ಶ್ರೀ ದೇವಸ್ಥಾನಕ್ಕೆ ಆಗಮಿಸಿ ಶೆಜ್ಜೇಶ್ವರನಿಗೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆಯೊಂದಿಗೆ ಕಾರ್ತಿಕೋತ್ಸವ ಸಂಪನ್ನಗೊಂಡಿತು.
ಈ ಎಲ್ಲ ಧಾರ್ಮಿಕ ಕೈಂಕರ್ಯಗಳಲ್ಲಿ ಶ್ರೀ ಶೆಜ್ಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಸರ್ವ ಸದಸ್ಯರು, ಅರ್ಚಕರು, ವೃತ್ತಿವಾನರು, ದೇವಳಿಯರು ಹಾಗೂ ಊರ ನಾಗರಿಕರು ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top