ಶಿರಸಿ: ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಹುಲೇಕಲ್ ಶ್ರೀದೇವಿ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ವಿವಿಧ ಇಲಾಖೆಗಳು ಮತ್ತು ಸಂಘ- ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಮತ್ತು ನೆರವಿನ ಮೂಲಕ ನಾಗರಿಕರ ಸಬಲೀಕರಣ ಹಾಗೂ ನಮಗೂ ಹಕ್ಕಿದೆ @75 ಅಭಿಯಾನವು ಶ್ರೀದೇವಿ ಸಂಯುಕ್ತ ಪದವಿ ಪೂರ್ವ ಕಾಲೇಜು ಹುಲೇಕಲ್ನಲ್ಲಿ ಜರುಗಿತು.
ಕಾರ್ಯಕ್ರಮವನ್ನು ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಶ್ರೀಮತಿ ಸೋಪಿಯಾ ಎನ್.ಇನಾಮದಾರ ಉದ್ಘಾಟಿಸಿ, ಅಭಿಯಾನದ ಉದ್ದೇಶಗಳ ಬಗ್ಗೆ ಮತ್ತು ದೈನಂದಿನ ಜೀವನದಲ್ಲಿ ಬೇಕಾಗುವ ಕಾನೂನುಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಸಿ.ಎಫ್.ಈರೇಶ್ ವಹಿಸಿದ್ದರು. ಜನಸಾಮಾನ್ಯರಿಗೆ ಕಾನೂನಿನ ಬಗ್ಗೆ ತಿಳಿಹೇಳುವುದು ‘ಕಾನೂನು ಅರಿವು’ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಹೆಚ್ಚುತ್ತಿರುವ ‘ಸೈಬರ್ ಕಾನೂನಿ’ನ ಬಗ್ಗೆ ಮಾಹಿತಿಯನ್ನು ನೀಡಿದರು.
ಮುಖ್ಯ ಅತಿಥಿಗಳಾಗಿ ಹುಲೇಕಲ್ ವಲಯ ಅರಣ್ಯಧಿಕಾರಿ ಉಷಾ ಆರ್.ಕಬ್ಬೆರ, ಶ್ರೀದೇವಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕ ಎಂ.ಜಿ.ಭಟ್ ಮತ್ತು ವಕೀಲ ಸತೀಶ್ ಜಿ.ನಾಯ್ಕ್ ಔಢಾಳ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ತಿಪ್ಪೇಸ್ವಾಮಿ ನಿರ್ವಹಿಸಿದರು.