ಚೆನ್ನೈ: ಚೆನ್ನೈ- ಬೆಂಗಳೂರು ಮತ್ತು ಮೈಸೂರು ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ಪ್ರಯಾಣಿಕ ರೈಲು ಇಂದಿನಿಂದ ಪ್ರಯೋಗಿಕ ಸಂಚಾರವನ್ನು ಆರಂಭಿಸಿದೆ. ವರದಿಗಳ ಪ್ರಕಾರ ರೈಲು ಮುಂಜಾನೆ 5.50 ಕ್ಕೆ ಚೆನ್ನೈನ ಎಂಜಿ ರಾಮಚಂದ್ರನ್ ಕೇಂದ್ರ ರೈಲು ನಿಲ್ದಾಣದಿಂದ ಪ್ರಯೋಗಿಕ ಸಂಚಾರವನ್ನು ಆರಂಭಿಸಿದೆ.
ಚೆನ್ನೈ -ಬೆಂಗಳೂರು-ಮೈಸೂರು ನಡುವಣ ವಂದೇ ಭಾರತ್ ಎಕ್ಸ್ಪ್ರೆಸ್ ಒಟ್ಟು 483 ಕಿಲೋಮೀಟರ್ ದೂರವನ್ನು ಕ್ರಮಿಸಲಿದೆ. ನವೆಂಬರ್ 10ರಂದು ರೈಲು ಅಧಿಕೃತವಾಗಿ ಸಂಚಾರವನ್ನು ಆರಂಭಿಸಲಿದೆ.ಈ ವಂದೇ ಭಾರತ್ 2.0 ರೈಲುಗಳು ಕವಚ ಎಂಬ ರೈಲು ಡಿಕ್ಕಿ ತಪ್ಪಿಸುವ ವ್ಯವಸ್ಥೆ ಸೇರಿದಂತೆ ಆತ್ಯಾಧುನಿಕ ಸುರಕ್ಷಾ ವ್ಯವಸ್ಥೆಗಳನ್ನು ಹೊಂದಲಿದೆ
ಕೃಪೆ:-http://news13.in