ಅಂಕೋಲಾ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಂಕೋಲಾ ಘಟಕದ ವತಿಯಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಳೆಮಕ್ಕಿಯಲ್ಲಿ ವಯೋನಿವೃತ್ತಿಯನ್ನು ಹೊಂದಿದ ನಾಗರಾಜ ನಾಯಕ ಅವರನ್ನು ಮೊಗಟಾದ ಅವರ ಮನೆಯಂಗಳದಲ್ಲಿ ಅಭಿಮಾನಪೂರ್ವಕವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನನ್ನ ಮನೆಯಂಗಳದಲ್ಲಿ ನನ್ನನ್ನು ಗೌರವಿಸಿರುವುದು ನನಗೆ ಅತೀವ ಸಂತಸವನ್ನು ತಂದಿದೆ. ಸಂಘದ ಈ ಕಾರ್ಯ ಸರ್ವತ್ರ ಶ್ಲಾಘನೀಯ ಎಂದರು.
ಸನ್ಮಾನಿಸಿ ಮಾತನಾಡಿದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ.ನಾಯಕ ಹೊಸ್ಕೇರಿ, ಸರ್ಕಾರಿ ನೌಕರನಿಗೆ ನಿವೃತ್ತಿ ಎನ್ನುವುದು ಸಹಜವಾದ ಪ್ರಕ್ರಿಯೆಯಾಗಿದ್ದು, ನಿವೃತ್ತಿಯ ನಂತರವೂ ಉತ್ಸಾಹವನ್ನು ಕಳೆದುಕೊಳ್ಳದೆ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆನಂದು ಗಾಂವಕರ, ಶೇಖರ ಗಾಂವಕರ ಅಭಿನಂದಿಸಿದರು. ಸಂಘದ ಸದಸ್ಯರಾದ ಲಕ್ಷ್ಮಿ ನಾಯಕ, ಆನಂದು ನಾಯ್ಕ, ದಿವಾಕರ ದೇವನಮನೆ, ಶೋಭಾ ಎಸ್. ನಾಯಕ, ವೆಂಕಮ್ಮ ನಾಯಕ, ವಿನಾಯಕ ಪಿ. ನಾಯ್ಕ, ಸಂಜೀವ ಆರ್. ನಾಯಕ, ಶಿಕ್ಷಕರಾದ ಚಂದ್ರಕಾಂತ ಗಾಂವಕರ, ನಾಗವೇಣಿ ನಾಯಕ, ರಂಜನಾ ನಾಯಕ, ಅನುಪಮಾ ನಾಯಕ, ಮಂಜಪ್ಪ ಅಂಗರಗಟ್ಟಿ ಉಪಸ್ಥಿತರಿದ್ದರು. ಲಕ್ಷ್ಮಿ ಬಿ.ನಾಯಕ, ಶ್ರದ್ಧಾ, ಶ್ರಾವ್ಯಾ ಸಹಕರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಎಚ್.ನಾಯಕ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಪಾಧ್ಯಕ್ಷೆ ಭಾರತಿ ಬಿ.ನಾಯಕ ವಂದಿಸಿದರು.