ಹೊನ್ನಾವರ: ಇಲ್ಲಿನ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ಬಾಯಿಯ ಕ್ಯಾನ್ಸರ್ ಕುರಿತಾದ ಸಂವಾದ ಜರುಗಿತು. ಹೊನ್ನಾವರ, ಕುಮಟಾ ಹಾಗೂ ಅಂಕೋಲಾ ತಾಲೂಕಿನ 30ಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು. ಈ ಸಂವಾದದ ಜೊತೆಗೆ ವಿಶೇಷವಾಗಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿ ಶಸ್ತ್ರ ಚಿಕಿತ್ಸೆಯ ನೇರ ಪ್ರದರ್ಶನವನ್ನ ಯಶಸ್ವಿಯಾಗಿ ಮಾಡಲಾಗಿದೆ.
72 ವರ್ಷ ವಯಸ್ಸಿನ ವ್ಯಕ್ತಿಗೆ ತಂಬಾಕು ತಿನ್ನುವುದರಿಂದ ಬಾಯಿಯ ಕ್ಯಾನ್ಸರ್ ಆಗಿತ್ತು. 6 ಗಂಟೆಗಳ ಸುದೀರ್ಘ ಶಸ್ತ್ರ ಚಿಕಿತ್ಸೆ ಮಾಡಿ ಕ್ಯಾನ್ಸರ್ ಭಾಗವನ್ನು ತೆಗೆದು ಹಾಕಲಾಗಿದೆ. ಇದನ್ನು 30ಕ್ಕೂ ಅಧಿಕ ವೈದ್ಯರು ವೀಕ್ಷಿಸಿದರು. ಆಸ್ಪತ್ರೆಯಲ್ಲಿ ಕಳೆದ 5 ವರ್ಷದಲ್ಲಿ 100 ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿದ್ದು, ಆಯುಷ್ಮಾನ ಭಾರತ್ ಯೋಜನೆಯಡಿ ಬಿಪಿಲ್ ಕಾರ್ಡ್ ಹೊಂದಿದವರಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ವೈದ್ಯರುಗಳಾದ ಡಾ.ವಿಶ್ವಾಸ್ ಪೈ, ಕ್ಯಾನ್ಸರ್ ಸರ್ಜನ್ ಡಾ.ವಾಗೀಶ್ ಭಟ್, ಮ್ಯಾಕ್ಸಿಲ್ಲೋ ಫೇಸಿಯಲ್ ಸರ್ಜನ್ ಶಸ್ತ್ರಚಿಕಿತ್ಸೆ ನೆರವೇರಿಸಿದರು. ಡಾ.ಸುಷ್ಮಾ ಪೈ ಹಾಗೂ ಡಾ.ಅಮೃತ ಬಲಕುರ್ ಅನಸ್ತೇಶಿಯಾವನ್ನು ಯಶಸ್ವಿಯಾಗಿ ನೀಡಿದರು. ಶುಶ್ರೂಕಿಯರಾದ ಆಶಾ, ಸಚಿನ್, ಉಷಾ, ವಿಕ್ಟೋರಿಯಾ, ರೇಖಾ, ಮಿತೇಶ್ ಭಾಗವಹಿಸಿದ್ದರು. ಸಿಸ್ಟೆರ್ ಮಾರಿಯಾ ಗೊರಟ್ಟಿ ಅಧ್ಯಕ್ಷತೆ ವಹಿಸಿದ್ದರು.