Slide
Slide
Slide
previous arrow
next arrow

ತಾಲೂಕಿನ ಖರ್ವಾ ಆರೋಗ್ಯ ಕೇಂದ್ರಕ್ಕೆ ಇಸಿಜಿ ಉಪಕರಣ

300x250 AD

ಹೊನ್ನಾವರ: ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ವಿಶೇಷವಾಗಿ ಮತ್ತು ದೇಶದ ಉತ್ತರದ ಗಡಿಯಲ್ಲಿಯೂ ನೂರಾರು ಜೀವ ಉಳಿಸಿದ ಮಂಗಳೂರು ಕೆಎಂಸಿಯ ಹೃದಯ ವಿಭಾಗದ ಮುಖ್ಯಸ್ಥ ಡಾ.ಪದ್ಮನಾಭ ಕಾಮತ್ ನೇತೃತ್ವದ ಸಿಎಡಿ ಯೋಜನೆಯ 700ನೇ ಇಸಿಜಿ ಉಪಕರಣ ತಾಲೂಕಿನ ಖರ್ವಾ ಆರೋಗ್ಯ ಕೇಂದ್ರಕ್ಕೆ ನೀಡಲಾಗಿದ್ದು, ಇಂದಿನಿಂದ ಕೆಲಸ ಆರಂಭಿಸಿರುವುದಾಗಿ ವೈದ್ಯಾಧಿಕಾರಿ ಡಾ.ವಿವೇಕ ಭಗತ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಇನ್ನೂ 50 ಇಸಿಜಿ ಉಪಕರಣವನ್ನು ವಿವಿಧೆಡೆ ಕೊಡಲಾಗುತ್ತಿದೆ ಎಂದು ಡಾ.ಕಾಮತ್ ಹೇಳಿದ್ದಾರೆ. ದೇಣಿಗೆ ಪಡೆದ 35-70ಸಾವಿರ ರೂಪಾಯಿವರೆಗಿನ ಮೌಲ್ಯದ ಉಪಕರಣವನ್ನು ಉಚಿತವಾಗಿ ಆಸ್ಪತ್ರೆಗಳಿಗೆ ನೀಡಲಾಗುತ್ತಿದ್ದು ಅಲ್ಲಿಯ ವೈದ್ಯರು ಎದೆನೋವು ಅಥವಾ ಹೃದಯದ ಕಾಯಿಲೆ ಎಂದು ಬಂದವರ ಇಸಿಜಿ ತೆಗೆದು ಕಾಮತರಿಗೆ ಕಳಿಸಿದರೆ ತಕ್ಷಣ ವೈದ್ಯಕೀಯ ಸಲಹೆ ನೀಡಲಾಗುತ್ತದೆ. ಉತ್ತರಕನ್ನಡದಲ್ಲಿ 70ಕ್ಕೂ ಹೆಚ್ಚು ಇಸಿಜಿ ಉಪಕರಣಗಳು ವಿವಿಧ ತಾಲೂಕಾಸ್ಪತ್ರೆ, ಖಾಸಗಿ ವೈದ್ಯರಲ್ಲಿ, ಅಂಗನವಾಡಿ ಮತ್ತು ಗ್ರಾಮಪಂಚಾಯತ ಕೇಂದ್ರಗಳಲ್ಲಿಯೂ ಇವೆ.
ಡಾ. ಕಾಮತರು ಕ್ಯಾಥ್ ಲ್ಯಾಬ್, ಕ್ಲಿನಿಕ್, ಮನೆ ಎಲ್ಲೇ ಇರಲಿ ಸರಾಸರಿ ದಿನಕ್ಕೆ 85 ರಿಂದ 100 ಇಸಿಜಿ ಸಂದೇಶ ಪಡೆದು ತಕ್ಷಣ ಸ್ಪಂದಿಸುತ್ತಾರೆ. ಕಳೆದ ನಾಲ್ಕು ವರ್ಷದಲ್ಲಿ 75ಸಾವಿರ ಇಸಿಜಿ ವರದಿ ಪಡೆದು ಸಲಹೆ ನೀಡಲಾಗಿದೆ. ಒಂದು ಇಸಿಜಿಗೆ 200ರೂಪಾಯಿ ಅಂದಾಜಿನಂತೆ ಸಾರ್ವಜನಿಕರಿಗೆ 1.5ಕೋಟಿ ರೂಪಾಯಿ ಲಾಭವಾಗಿದೆ. 10ಸಾವಿರ ಜನರಿಗೆ ತುರ್ತುಚಿಕಿತ್ಸೆಗೆ ಮಾರ್ಗದರ್ಶನ ನೀಡಿ ಜೀವ ಉಳಿಸಲಾಗಿದೆ. ಇದರ ಬೆಲೆ ಕಟ್ಟಲಾಗದು. ಇಷ್ಟೊಂದು ಕೆಲಸಮಾಡಿದ್ದರೂ ಹಣ ಇಲ್ಲದ ಕಾರಣ ಹಗರಣವೂ ಇಲ್ಲ. ಆದ್ದರಿಂದಲೇ ಈ ಯೋಜನೆಯನ್ನು ಪ್ರಧಾನಮಂತ್ರಿ ಮೋದಿಯವರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಡಾ. ಕಾಮತ್ ಈ ವಿಚಾರಗಳನ್ನು ಹಂಚಿಕೊಡಿದ್ದು ಮೊದಲು ನಾವು ವೈದ್ಯರನ್ನು ಸಂಪರ್ಕಿಸುತ್ತಿದ್ದೆವು, ಈಗ ಈ ಯೋಜನೆಯ ಪ್ರಯೋಜನ ಅರಿತು ವೈದ್ಯರೇ ಮುಂದಾಗಿ ಬಂದು ಉಪಕರಣ ಕೇಳುತ್ತಿದ್ದು ಯೋಜನೆ ರಾಷ್ಟ್ರವ್ಯಾಪಿ ಯಾಗಬೇಕು, ಇನ್ನಷ್ಟು ಸಹೃದಯರು, ಹೃದಯವೈದ್ಯರು ನಮ್ಮ ಜೊತೆ ಕೈಜೋಡಿಸಿದರೆ ಯೋಜನೆಯ ಲಾಭ ಹೆಚ್ಚು ಜನರಿಗೆ ದೊರೆಯುತ್ತದೆ ಎಂದು ಅವರು ಹೇಳಿದ್ದಾರೆ.

300x250 AD
Share This
300x250 AD
300x250 AD
300x250 AD
Back to top