ಬೆಂಗಳೂರು: 67ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಇಂದು ರಾಜ್ಯ ಸರ್ಕಾರ ಆಯೋಜನೆ ಮಾಡಿರುವ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಯಿಂದಲೂ ಅಭೂತಪೂರ್ವ ಸ್ಪಂದನೆ ದೊರಕಿದೆ. ಕರಾವಳಿಯ ಕಡಲ ಕಿನಾರೆಯಿಂದ ಹಿಡಿದು ಆಗಸದವರೆಗೂ ಕನ್ನಡ ಗೀತೆ ಮೊಳಗಿದೆ.
ಇಂದು ಬೆಳಗ್ಗೆ ಸ್ಪೈಸ್ ಜೆಟ್ ನಲ್ಲಿ ವಿಮಾನದ ಸಿಬ್ಬಂದಿ ಹಾಗೂ ಪ್ರಯಾಣಿಕರು ‘ಕೋಟಿ ಕಂಠ ಗಾಯನ’ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸುವ ಭಾಗವಾಗಿ ಒಟ್ಟಿಗೆ ಕನ್ನಡ ಹಾಡನ್ನು ಹಾಡಿ ಎಲ್ಲದ ಹೃದಯ ಗೆದ್ದಿದ್ದಾರೆ.
ವರನಟ ಡಾ. ರಾಜ್ ಕುಮಾರ್ ಹಾಡಿರುವ ಡಾ. ಹಂಸಲೇಖ ರಚಿಸಿರುವ ಹುಟ್ಟಿದ್ದರೆ ಕನ್ನಡ ನಾಡಲ್ಲಿ ಮೆಟ್ಟಿದರೆ ಕನ್ನಡ ಮಣ್ಣನ್ನು ಮೆಟ್ಟಬೇಕು’ ಗೀತೆ ಹಾಡುವ ಮೂಲಕ ಕನ್ನಡ ಭಾಷೆಗೆ ನಮನ ಸಲ್ಲಿಸಿದ್ದಾರೆ.
ಈ ವಿಡಿಯೋವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್ ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮಂಗಳೂರು, ಉಡುಪಿ ಕಡಲ ಕಿನಾರೆಯಲ್ಲೂ ಶಾಲಾ ಮಕ್ಕಳು ಕನ್ನಡ ಗೀತೆಯನ್ನು ಹಾಡುವ ಮೂಲಕ ತಮ್ಮ ಕನ್ನಡಾಭಿಮಾನ ಮರೆದಿದ್ದಾರೆ.