ಸಿದ್ದಾಪುರ: 2022-23 ನೇ ಸಾಲಿನ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಅಳವಡಿಸಿದ ರೈತರು ಮಾರ್ಗಸೂಚಿ, ಜೇಷ್ಠತೆ ಹಾಗೂ ಅನುದಾನ ಲಭ್ಯತೆ ಅನುಸಾರ ಸಹಾಯಧನ ಪಡೆಯಲು ಅವಕಾಶವಿರುತ್ತದೆ. 2 ಹೆಕ್ಟೇರ್ ವಿಸ್ತೀರ್ಣದಲ್ಲಿ ಹನಿ /ತುಂತುರು ನೀರಾವರಿ ಅಳವಡಿಸಿದ ಪರಿಶಿಷ್ಠ ಜಾತಿ, ಪರಿಶಿಷ್ಟ ವರ್ಗದ ರೈತರು ಶೇಕಡಾ.90 ಹಾಗೂ ಇತರೆ ವರ್ಗದ ರೈತರು ಶೇಕಡಾ.75 ಸಹಾಯಧನ ಪಡೆಯಬಹುದಾಗಿದೆ. 2 ಹೆಕ್ಟೇರ್ ನಿಂದ 5 ಹೆಕ್ಟೇರ್ ವಿಸ್ತೀರ್ಣಕ್ಕೆ ಶೇಕಡಾ 45ರ ಸಹಾಯಧನವನ್ನು ಎಲ್ಲಾ ವರ್ಗದ ರೈತರು ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳನ್ನು ತೋಟಗಾರಿಕೆ ಇಲಾಖೆ, ಸಿದ್ದಾಪುರ ಕಛೇರಿಯಿಂದ ಪಡೆಯಬಹುದಾಗಿದೆ.( 6360012441 / 7353346902 / 9535906269 / 9535490912 / 8310020952 / 9740636382 / 9480644550 ) ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.