Slide
Slide
Slide
previous arrow
next arrow

ಸರಕಾರ ನೀಡುವ ಈ ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ : ಕಾಗೇರಿ

300x250 AD

ಸಿದ್ದಾಪುರ: ಕೇಂದ್ರ, ರಾಜ್ಯ ಸರಕಾರಗಳು ಎಲ್ಲ ಇಲಾಖೆಗಳ ಮೂಲಕ ಜನತೆಗೆ ವಿವಿಧ ಸೌಲಭ್ಯ, ಸವಲತ್ತುಗಳನ್ನು ಒದಗಿಸುತ್ತಿದ್ದು ಅವುಗಳ ಸದುಪಯೋಗವನ್ನು ಫಲಾನುಭವಿಗಳು ಪಡೆದುಕೊಳ್ಳಬೇಕು. ನೂರಾರು ಯೋಜನೆಗಳ ಮೂಲಕ ಜನರಿಗೆ ನೆರವಾಗಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಪಟ್ಟಣದ ತಾ.ಪಂ ಸಭಾಭವನದಲ್ಲಿ ಕಂದಾಯ ಮುಂತಾದ ಹಲವು ಇಲಾಖೆಗಳ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ, ಕೃಷಿ ಪರಿಕರಗಳನ್ನು ವಿತರಿಸಿ ಮಾತನಾಡಿ ಸರಕಾರ ಹಮ್ಮಿಕೊಂಡ ಅಗತ್ಯ ಯೋಜನೆಗಳ ಬಗ್ಗೆ ವೃದ್ಧಾಪ್ಯವೇತನ, ರೈತಸಂಜೀವಿನಿ, ಭೂಮಿ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಇತ್ತೀಚೆಗೆ ಅನುಷ್ಠಾನಗೊಂಡ ಗ್ರಾಮ ಒನ್ ಮುಂತಾದ ಕಂದಾಯ ಇಲಾಖೆಯ ಹಲವು ಯೋಜನೆಗಳೇ ಸಾಕ್ಷಿಯಾಗಿದೆ. ಆರೋಗ್ಯ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮುಂತಾದ ಎಲ್ಲ ಇಲಾಖೆಗಳ ಮೂಲಕ ಜನರಿಗೆ ನೆರವಾಗಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೃಷಿಕರಿಗೆ ಉಚಿತ ನೀರಾವರಿ ವಿದ್ಯುತ್, ಗ್ರಾಮೀಣ ಭಾಗದಲ್ಲಿ ಬೆಳಕು ಯೋಜನೆ, ದೀನದಯಾಳ ವಿದ್ಯುದೀಕರಣ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇತ್ತೀಚೆಗೆ ಅಡಕೆ ಬೆಳೆಗೆ ತಗುಲಿದ ಎಲೆ ಚುಕ್ಕಿ ರೋಗದ ನಿಯಂತ್ರಣದ ಕುರಿತು ಉಚಿತ ಔಷಧಿಗಾಗಿ 4 ಕೋಟಿ ರೂ.ಮಂಜೂರು ಮಾಡಲಾಗಿದೆ. ಸರಕಾರ ನೀಡುವ ಈ ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವದು ಅಗತ್ಯ ಎಂದರು.
ಈ ಸಂದರ್ಭದಲ್ಲಿ ಕಂದಾಯ ಭೂಮಿಯಲ್ಲಿ ಕೃಷಿ ಹಾಗೂ ಮನೆ ಕಟ್ಟಿಕೊಳ್ಳಲು ಒತ್ತುವರಿ ಮಾಡಿಕೊಂಡ 11 ಫಲಾನುಭವಿಗಳಿಗೆ ಪಹಣಿಪತ್ರಿಕೆ ಸಹಿತ ಹಕ್ಕುಪತ್ರ, 30 ಮಂದಿಗೆ ಸಾಮಾಜಿಕ ಭದ್ರತಾ ಪಿಂಚಣಿ, 11 ಮಂದಿಗೆ ಇಂದಿರಾ ಗಾಂಧಿ ವೃದ್ಧಾಪ್ಯ ವೇತನ, 18 ಫಲಾನುಭವಿಗಳಿಗೆ ಸಂಧ್ಯಾಸುರಕ್ಷಾ ಯೋಜನೆಯ ಮಂಜೂರಿಪತ್ರ ನೀಡಲಾಯಿತು.
ತಹಶೀಲದಾರ ಸಂತೋಷ ಭಂಡಾರಿ, ಪ. ಪಂ ಸದಸ್ಯರಾದ ಮಾರುತಿ ನಾಯ್ಕ, ಗುರುರಾಜ ಶಾನಭಾಗ, ನಂದನ ಬರ‍್ಕರ ಮುಂತಾದವರಿದ್ದರು.

300x250 AD
Share This
300x250 AD
300x250 AD
300x250 AD
Back to top