Slide
Slide
Slide
previous arrow
next arrow

ವಕ್ಪ ಆಸ್ತಿ ಹಗರಣದ ಬಗ್ಗೆ ದೊಡ್ಡ ಮಟ್ಟದ ತನಿಖೆಯ ನಿರ್ಧಾರ ಸ್ವಾಗತಾರ್ಹ: ರಫೀಕ ಪಠಾಣ

300x250 AD

ಶಿರಸಿ : ಕರ್ನಾಟಕ ರಾಜ್ಯದಲ್ಲಿ ಅಂದಾಜು 2.5 ಲಕ್ಷ ಕೋಟಿ ಗಿಂತ ಹೆಚ್ಚು ವಕ್ಪ ಆಸ್ತಿಗಳನ್ನು ಕಾಂಗ್ರೆಸಿನ ನಾಯಕರು ಕಬಳಿಕೆ ಮಾಡಿರುವ ಕುರಿತು ಹಿಂದಿನ ಅಲ್ಪಾಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ ಮಾನಪಾಡಿಯವರು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದರು. ಈ ವರದಿಯು ಸದನದಲ್ಲಿ ಮಂಡನೆಯಾಗಿದೆ.
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳು ಉನ್ನತ ಮಟ್ಟದ ತನಿಖೆಗೆ ಆದೇಶ ನೀಡುತ್ತೇನೆಂದು ಹೇಳಿರುವುದರಿಂದ ಸ್ವಯಂ ಘೋಷಿತ ಅಲ್ಪಸಂಖ್ಯಾತರ ನಾಯಕರ ನಿಜ ಬಣ್ಣ ಬಯಲಾಗಲಿದೆ. ಮತ್ತು ಮುಖ್ಯಮಂತ್ರಿಗಳು ಸಮುದಾಯಕ್ಕೆ ನ್ಯಾಯ ದೊರಕಿಸಿ ಕೊಡುವಲ್ಲಿ ದಿಟ್ಟ ಕ್ರಮವನ್ನು ಕೈಗೊಂಡಿದ್ದಾರೆ ಎಂದು ಮಾಜಿ ಉತ್ತರ ಕನ್ನಡ ಜಿಲ್ಲಾ ವಕ್ಪ ಸಲಹಾ ಸಮಿತಿಯ ಅಧ್ಯಕ್ಷ ರಫೀಕ ಎಸ್. ಪಠಾಣ ಹೇಳಿದರು.

ವಕ್ಪ ಆಸ್ತಿ ಹಗರಣಕ್ಕೆ ಸಂಬಂಧಿಸಿ ಪತ್ರಿಕಾ ಪ್ರಕಟಣೆ ನೀಡಿದ ಅವರು, ಕಳೆದ 70 ವರ್ಷಗಳಿಂದ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರಿಗೆ ಪೊಳ್ಳು ಭರವಸೆಯನ್ನು ನೀಡಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಾ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಸಮುದಾಯ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುವುದರಲ್ಲಿ ಸಂಶಯವಿಲ್ಲ. ಮುಸ್ಲಿಂ ಸಮುದಾಯ ಕಾಂಗ್ರೆಸಿನವರ ಆಸ್ತಿಯೆಂದು ಭಾವಿಸಿದಂತಹ ನಾಯಕರು ಈಗ ತಲೆತಗ್ಗಿಸುವಂತಹ ಸಮಯ ಹತ್ತಿರವಾಗಿದೆ ಭಾರತೀಯ ಜನತಾ ಪಕ್ಷದ ಸರ್ಕಾರ ಸಮುದಾಯ ಹಿತ ಕಾಪಾಡಲು ಸದಾ ಸಿದ್ಧವಿದೆ. ಸಮುದಾಯಕ್ಕೆ ಸಿಗಬೇಕಾದ ಎಲ್ಲ ಸವತ್ತುಗಳನ್ನು ನೀಡಿ ಸಮುದಾಯದ ಹಿತವನ್ನು ಕಾಪಾಡಿದೆ. ವಕ್ಪ ಆಸ್ತಿಯ ಹಗರಣ ತನಿಖೆ ಮಾಡಿದಲ್ಲಿ ಉನ್ನತ ಮಟ್ಟದ ಕಾಂಗ್ರೆಸ ನಾಯಕರು ಜೈಲಿಗೆ ಹೋಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಈಗಲಾದರು ಕಾಂಗ್ರೆಸಿನವರು ಓಲೈಕೆ ರಾಜಕಾರಣವನ್ನು ಬಿಟ್ಟು ಸಮುದಾಯದ ಶ್ರೇಯೋಭಿವೃದ್ಧಿಗೆ ಗಮನ ಕೊಡಬೇಕು. ಮುಸ್ಲಿಂ ಸಮುದಾಯದವರು ಕಾಂಗ್ರೆಸಿನ ಪೊಳ್ಳು ಭರವಸೆಗಳಿಗೆ ಬಲಿಯಾಗಬಾರದು. ಸಮುದಾಯದವರು ಸಹ ಯೋಜನೆ ಮಾಡಿ ಮುಂದಿನ ದಿನಗಳಲ್ಲಿ ಕಾಂಗ್ರೆಸಿಗೆ ತಕ್ಕ ಪಾಠವನ್ನು ಕಲಿಸಬೇಕೆಂದು ಆಶಯ ವ್ಯಕ್ತಪಡಿಸಿದ್ದಾರೆ.

300x250 AD

Share This
300x250 AD
300x250 AD
300x250 AD
Back to top