ಶಿರಸಿ: ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಗಣಿತಶಾಸ್ತ್ರ ಸ್ನಾತಕೋತ್ತರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕರ್ನಾಟಕ ವಿಶ್ವವಿದ್ಯಾಲಯ ನಡೆಸಿದ ಪರೀಕ್ಷಾ ಫಲಿತಾಂಶ ಬಂದಿದ್ದು 100% ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಪೂಜಾ ಸತೀಶ್ ಪಟಗಾರ್ 96.33 ಪ್ರತಿಶತ ಅಂಕಗಳಿಸಿ ಪ್ರಥಮ ಸ್ಥಾನ ಗಳಿಸಿದರೆ, 96.17 ಪ್ರತಿಶತ ಅಂಕಗಳಿಸಿದ ರವೀನಾ ದ್ವಿತೀಯ ಸ್ಥಾನ ಹಾಗೂ 96 ಪ್ರತಿಶತಗಳೊಂದಿಗೆ ಮಧುರಾ ಹೆಗಡೆ ತೃತೀಯ ಸ್ಥಾನವನ್ನು ಸ್ನಾತಕೋತ್ತರ ಎರಡನೇ ವರ್ಷದಲ್ಲಿ ಗಳಿಸಿದ್ದು, ಎರಡೂ ವರ್ಷದ ಒಟ್ಟಾರೆ ಅಂಕಗಳ ಆಧಾರದ ಮೇಲೆ ಮಹಾವಿದ್ಯಾಲಯಕ್ಕೆ ಪೂಜಾ ಪಟಗಾರ್ 94.62% ಪ್ರಥಮ, ಛಾಯಾ ಹೆಗಡೆ 94.4% ದ್ವೀತಿಯ ಹಾಗೂ ರವೀನಾ ನಾಯ್ಕ 93.6% ತೃತೀಯ ಸ್ಥಾನವನ್ನು ಗಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಎಂಇಎಸ್ ನ ಅಧ್ಯಕ್ಷರಾದ ಜಿ ಎಂ ಹೆಗಡೆ ಮುಳಖಂಡ,ಉಪಸಮಿತಿ ಅಧ್ಯಕ್ಷರಾದ ಎಸ್ ಕೆ ಭಾಗವತ್, ಪದಾಧಿಕಾರಿಗಳು. ಪ್ರಾಚಾರ್ಯ ಡಾ ಟಿ ಎಸ್ ಹಳಮನೆ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.