Slide
Slide
Slide
previous arrow
next arrow

ಪುರಸ್ಕಾರಗಳು ಸುಲಭವಾಗಿ ದೊರೆಯುವುದಿಲ್ಲ: ಟಿ.ಎಸ್. ಹಳೆಮನೆ

300x250 AD

ಶಿರಸಿ: ಪುರಸ್ಕಾರಗಳು ಸುಲಭವಾಗಿ ದೊರೆಯುವುದಿಲ್ಲ. ಶ್ರದ್ಧೆ, ನಿಷ್ಠೆ, ಶ್ರಮ, ಸಾಧನೆ ಇದರ ಹಿಂದೆ ಇರುತ್ತದೆ. ವಿದ್ಯಾರ್ಥಿಗಳಾದ ನೀವು ಶಿಸ್ತುಬದ್ಧ ಜೀವನವನ್ನು ನಡೆಸುವುದನ್ನು ಕಲಿಯಬೇಕು. ಈ ಶಿಸ್ತನ್ನು ಸ್ಕೌಟ್ಸ್ ಮತ್ತು ಗೈಡ್ಸ್ ನಿಮಗೆ ನೀಡುತ್ತದೆ ಎಂದು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಟಿ.ಎಸ್. ಹಳೆಮನೆ ಹೇಳಿದರು.

ಅವರು ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ, ಶಿರಸಿ ಶೈಕ್ಷಣಿಕ ಜಿಲ್ಲೆಯ ಪದವಿ ಕಾಲೇಜುಗಳ  ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ರಾಜ್ಯೋತ್ಸವ ಪುರಸ್ಕಾರ ತರಬೇತಿ ಶಿಬಿರದಲ್ಲಿ ಮಾತನಾಡುತ್ತಿದ್ದರು.

     ಶಿಸ್ತನ್ನು ಕಲಿಸಲೆಂದೇ ಜಗತ್ತಿನಲ್ಲಿ ಅನೇಕ ಸಂಘಟನೆಗಳಿವೆ. ಅಂತಹ ಸಂಘಟನೆಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಬಂದಾಗಿದೆ. ಇದರ ಮೂಲ ಸಂಸ್ಥಾಪಕ ರಾಬರ್ಟ್ ಬೇಡನ್ ಉದ್ದೇಶವು ಇದೆ ಆಗಿತ್ತು. ನೀವು ನಾಲ್ಕು ಗೋಡೆಗಳ ಮಧ್ಯೆ ಪಠ್ಯವನ್ನು ಕಲಿಯುತ್ತೀರಿ ಇದರ ಜೊತೆಗೆ ಇಂತಹ ಘಟಕಗಳು ನಿಸರ್ಗದ ಮಡಿಲಲ್ಲಿ ಸಮನ್ವಯದಿಂದ ಬಾಳಲು ಪ್ರೇರೇಪಿಸುತ್ತವೆ. ಮೊದಲು ಗಂಡು ಮಕ್ಕಳಿಗಷ್ಟೇ ಸೀಮಿತವಾಗಿದ್ದ ಇದು ಇಂದು ಹೆಣ್ಣು ಮಕ್ಕಳನ್ನು ತಲುಪಿದೆ. 2 ಲಕ್ಷ 70000ಕ್ಕೂ ಅಧಿಕ ವಿದ್ಯಾರ್ಥಿ ಕಾರ್ಯಕರ್ತರನ್ನ ಹೊಂದಿ ಹೆಮ್ಮೆರವಾಗಿ ಬೆಳೆದಿದೆ ಎಂದರು.

300x250 AD

ಸ್ಕೌಟ್ನ ಡಿಸಿವಿಎಚ್ ಭಟ್ಕಳ ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ತರಬೇತಿ ಆದವರಿಗೆ ಉನ್ನತ ಶಿಕ್ಷಣ, ಉದ್ಯೋಗಾವಕಾಶದ ಸಂದರ್ಭದಲ್ಲಿ ಮೀಸಲಾತಿ ಇದ್ದು ಅನುಕೂಲತೆಗಳಾಗುತ್ತವೆ. ನೀವೆಲ್ಲರೂ ಸಮಯಕ್ಕೆ ಮಹತ್ವ ಕೊಡಿ. ಒಮ್ಮೆ ಸಮಯ ಜಾರಿದರೆ ಮತ್ತೆ ಸಿಗದು. ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳಿ  ಎಂದರು.

ರೋವರ್ ಲೀಡರ್ ಆರ್ ವೈ ಕೊಳೇಕರ್ ಸ್ವಾಗತಿಸಿ, ವಂದಿಸಿದರು.ವೀರೇಶ್, ಜ್ಯೋತಿ ಭಟ್,ಎಂ ಎಂ ಭಟ್,ಶಂಕರ್ ನಾಗರಕಟ್ಟೆ, ಪಿ ಎನ್ ನಾಯ್ಕ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಶಿರಸಿ ಶೈಕ್ಷಣಿಕ ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳ ವಿದ್ಯಾರ್ಥಿ ಕಾರ್ಯಕರ್ತರು ತರಬೇತಿಯನ್ನು ಪಡೆದರು.

Share This
300x250 AD
300x250 AD
300x250 AD
Back to top