Slide
Slide
Slide
previous arrow
next arrow

ನೈಸರ್ಗಿಕ ಸಂಪತ್ತನ್ನು ಅರಣ್ಯೇತರ ಉದ್ದೇಶಕ್ಕೆ ನೀಡದಂತೆ ಅನಂತ ಅಶೀಸರ ಆಗ್ರಹ

300x250 AD

ಶಿರಸಿ : ಬೆಟ್ಟ, ಹಾಡಿ, ಕುಮ್ಕಿ, ಗೋಮಾಳ, ಕಾನು ಮುಂತಾದ ಮಲೆನಾಡಿನ ಗ್ರಾಮ ಅರಣ್ಯಗಳು ರೈತರ ಸಹಭಾಗಿತ್ವದಲ್ಲಿ ನೂರಾರು ವರ್ಷಗಳಿಂದ ನಿರ್ವಹಣೆ, ಸಂರಕ್ಷಣೆ ಆಗುತ್ತಿದೆ. ಇದು ದೇಶದಲ್ಲೇ ಅನನ್ಯ ನಿಸರ್ಗ ಸಂರಕ್ಷಣೆಯ ಪರಂಪರೆ. ಕಂದಾಯ ಅರಣ್ಯ ಕಾನೂನುಗಳ ಅಡಿಯಲ್ಲಿ ಇರುವ ಗ್ರಾಮ ನೈಸರ್ಗಿಕ ಸಂಪತ್ತನ್ನು ಅರಣ್ಯೇತರ ಉದ್ದೇಶಕ್ಕೆ ನೀಡಬಾರದು, ಗ್ರಾಮ ಭೂಮಿ ರಕ್ಷಣೆಗೆ ಯೋಜನೆ ರೂಪಿಸಿ ಜಾರಿ ಮಾಡಬೇಕು ಎಂದು ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸರ್ಕಾರವನ್ನು ಆಗ್ರಹ ಮಾಡಿದರು.

ಅ.12 ರಂದು ಶಿರಸಿಯ ವಿಭಾಗ ಅರಣ್ಯ ಇಲಾಖೆಯ ಕಚೇರಿಯಲ್ಲಿ ನಡೆದ ಬೆಳೆಗಾರರು, ಪರಿಸರ ಸಂಘ ಸಂಸ್ಥೆಗಳ ನಿಯೋಗ ಸರ್ಕಾರಕ್ಕೆ ಹಕ್ಕೊತ್ತಾಯ ನೀಡುವ ಸಂದರ್ಭದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿರಸಿ, ಯಲ್ಲಾಪುರ, ಸಿದ್ದಾಪುರ, ಭಟ್ಕಳ, ಸಾಗರ, ಹೊಸನಗರ ತಾಲೂಕುಗಳ ಬೆಳೆಗಾರ ಮುಖಂಡರು ಸೊಪ್ಪಿನ ಬೆಟ್ಟಗಳ ಕುರಿತು ಇತ್ತಿಚಿನ ಆದೇಶಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಬೆಟ್ಟ ಸೌಲಭ್ಯಗಳನ್ನು ಮುಂದುವರೆಸಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ವಿಜ್ಞಾನಿ ಪ್ರಭಾಕರ ಭಟ್ ತಟ್ಟಿಕೈ ಬೆಟ್ಟ ಅಧಯಯನ ಮಾಹಿತಿ ನೀಡಿದರು. ಉ.ಕ.ದ ಬೆಟ್ಟ ಜಾಗೃತಿ ಅಭಿಯಾನದ ಸಂಚಾಲಕ ನರೇಂದ್ರ ಹೊಂಡಗಾಶಿ ಅವರು ಬೆಟ್ಟಗಳು ಮಲೆನಾಡಿನ ಬೆನ್ನೆಲಬು. 15 ವರ್ಷಗಳ ನಮ್ಮೆಲ್ಲರ ಅಭಿಯಾನದಿಂದ ಬೆಟ್ಟ ಸಂರಕ್ಷಣೆ ಅಭಿವೃದ್ಧಿ ಸಾಧ್ಯವಾಗಿದೆ. ಅರಣ್ಯ ಸಂಕ್ಷಣಾ ಕಾಯಿದೆ ವ್ಯಾಪ್ತಿಯಲ್ಲಿ ಉ.ಕ. ಜಿಲ್ಲೆಯ ಬೆಟ್ಟ ಭೂಮಿ ಇದೆ ಎಂಬ ತಜ್ಞ ಮಾಹಿತಿ ನೀಡಿದರು. ಬೆಟ್ಟ ಅತಿಕ್ರಮಣ ಸಲ್ಲದು ಎಂದರು. ಪರಿಸರ ಅಧ್ಯಯನಕಾರ ಬಾಲಚಂದ್ರ ಸಾಯಿಮನೆ ಅವರು ವಿಶ್ವಸಂಸ್ಥೆಯಿಂದಲೂ ಉ.ಕ. ದ ರೈತರ ಬೆಟ್ಟ ನಿರ್ವಹಣೆ ಪ್ರಶಂಸೆಗೆ ಒಳಗಾಗಿದೆ ಎಂದರು.
ಸರ್ಕಾರದ ಪರವಾಗಿ ಮನವಿ ಸ್ವೀಕರಿಸಿದ ಉಪಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಅವರು ಉ.ಕ. ಜಿಲ್ಲೆಯಲ್ಲಿ ಕೆನರಾ ಪ್ರಿವಿಲೆಜ್ ಅಡಿಯಲ್ಲಿ ಬೆಟ್ಟ ಸವಲತ್ತು ನೀಡಲಾಗಿದೆ. ಬೆಟ್ಟಗಳು ಅರಣ್ಯ ಕಾಯಿದೆ ವ್ಯಾಪ್ತಿಯಲ್ಲಿ ಇವೆ. ಉ.ಕ. ಜಿಲ್ಲೆಯ ಬೆಟ್ಟಗಳ ನಿರ್ವಹಣೆ ಬೆಳೆಗಾರರಿಂದ ಆಗುತ್ತಿದೆ. ಇದು ಕಂದಾಯಭೂಮಿ ಅಲ್ಲ. ಅರಣ್ಯೀತರ ಉದ್ದೇಶಕ್ಕೆ ವಿತರಿಸಲು ಅವಕಾಶ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ವಿಶ್ವನಾಥ ಪುಟ್ಟನ್ಮನೆ, ರಮಾಕಾಂತ ಮಂಡೆಮನೆ, ರತ್ನಾಕರ ಬಾಡಲಕೊಪ್ಪ, ಲಕ್ಷ್ಮೀಶ್ ನಿಟ್ಟೂರೂ, ವಾಗೀಶ ಹೆಬ್ಬಾರ, ಗಣಪತಿ ಕೆ. ಬಿಸಲಕೊಪ್ಪ, ನಾಗಪತಿ ಹರತೆಬೈಲು, ದಿನೇಶ ಮಣ್ಮನೆ, ಮಂಜುನಾಥ ಅರೇಕಟ್ಟಾ ವಿಶ್ವನಾಥ ಬುಗಡಿಮನೆ ಮುಂತಾದವರು ಅಭಿಪ್ರಾಯ ಮಂಡಿಸಿದರು.
ಮಲೆನಾಡು ಪ್ರದೇಶದಲ್ಲಿನ ಬೆಟ್ಟ ಭೂಮಿಯನ್ನು ಬೇರೆ ಉದ್ದೇಶಗಳಿಗೆ ನೀಡಲು ಕ್ಯಾಬಿನೆಟ್ ಉಪಸಮಿತಿ ರಚಿಸಿದ ಸಂದರ್ಭದಲ್ಲಿ 2022ರ ಮಾರ್ಚನಲ್ಲಿ ಹಲವು ಸಭೆಗಳು ನಡೆದಿದ್ದವು. ಬೆಳೆಗಾರರ ನಿಯೋಗ ಮುಖ್ಯಮಂತ್ರಿ ಮತ್ತು ಗೃಹಮಂತ್ರಿಗಳನ್ನು ಭೇಟಿ ಮಾಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಇದೇ ಸಂದರ್ಭದಲ್ಲಿ “ಕತ್ತಲೆಕಾನು, ಎಕ್ಕಂಬಿ ಹಾಗೂ ವಾನಳ್ಳಿಯ ಸೀತಾ-ಅಶೋಕವನ, ಬನವಾಸಿಯ ಕಾನುಗಳು ಹಾಗೂ ಮಿರಿಸ್ಟಿಕಾ ಸ್ಟಾಂಪ್ ಇವುಗಳ ರಕ್ಷಣಾ ಯೋಜನೆಗಳನ್ನು ಜಾರಿ ಮಾಡುತ್ತೇವೆ” ಎಂದು ಶಿರಸಿ ಡಿಸಿಎಫ್ ಪರಿಸರ ನಿಯೋಗಕ್ಕೆ ಭರವಸೆ ನೀಡಿದರು. ಎಸಿಎಫ್ ರಘು, ಎಸಿಎಫ್ ಅಶೋಕ ವಲಯ ಅಧಿಕಾರಿ ಹೆಬ್ಬಾರ ಇನ್ನಿತರ ಅರಣ್ಯ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

300x250 AD
Share This
300x250 AD
300x250 AD
300x250 AD
Back to top