ದಾಂಡೇಲಿ: ತಾಲೂಕಿನ ಕೇರವಾಡದಲ್ಲಿರುವ ಶ್ರೇಯಸ್-ಶ್ರೀನಿಧಿ ಕಾರ್ಖಾನೆಯ ಐವರು ಕಾರ್ಮಿಕರು ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ಸರಕಾರದಿಂದ ಬಂದಿರುವ ಗ್ರಾಚ್ಯುವಿಟಿ ಹಣವನ್ನು ಕಾರ್ಖಾನೆಯ ಮಾಲಕರುಗಳಾದ ಟಿ.ಎಸ್.ಸೋರಗಾವಿ ಮತ್ತು ಚಿಕ್ಕಯ್ಯ ಮಠಪತಿಯವರನ್ನೊಳಗೊಂಡ ಆಡಳಿತ ಮಂಡಳಿ ಈವರೆಗೆ ಕೊಡದೇ ಸತಾಯಿಸಿ, ವಂಚಿಸುತ್ತಿದೆ ಎಂದು ಆರೋಪಿಸಿ ಮೃತ ಕಾರ್ಮಿಕರ ಕುಟುಂಬಸ್ಥರು ಪ್ರತಿಭಟಿಸಿದ್ದಾರೆ.
ಮೃತ ಐವರು ಕಾರ್ಮಿಕರ ಪತ್ನಿಯರಾದ ಅನಿತಾ ಕಮ್ಮಾರ್, ರೂಪಾ ಶಿಂಧೆ, ಕಮಲ ಪಾಸಲ್ಕರ್, ರಿಹಾನಾ ಯಾದವಾಡ ಮತ್ತು ಸುಮಿತ್ರಾ ಚೊಪ್ಡೆಯವರು ಶ್ರೇಯಸ್- ಶ್ರೀನಿಧಿ ಕಾರ್ಖಾನೆಯ ಆವರಣದಲ್ಲಿ ಮೃತ ಕಾರ್ಮಿಕರ ಕುಟುಂಬಕ್ಕೆ ಸಿಗಬೇಕಾದ ಗ್ರಾಚ್ಯುವಿಟಿ, ಪಿಎಫ್ ಹಣ ಮತ್ತು ದುಡಿದಿರುವ ವೇತನವನ್ನು ನೀಡುವಂತೆ ಆಗ್ರಹಿಸಿ ಮಾಡುತ್ತಿರುವ ಪ್ರತಿಭಟನೆ ಮುಂದುವರಿದಿದೆ.
ಈ ನಡುವೆ ಸ್ಥಳಕ್ಕೆ ತಹಶೀಲ್ದಾರ್ ಶೈಲೇಶ ಪರಮಾನಂದ ಅವರು ಭೇಟಿ ನೀಡಿ, ಪ್ರತಿಭಟನಾಕಾರರ ಮನವಿಯನ್ನು ಅಲಿಸಿದ್ದಾರೆ.