ಶಿರಸಿ: ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಸುಫ್ರೀಂ ಕೋರ್ಟನ ಅಂತಿಮ ವಿಚಾರಣೆಯ ಹಿನ್ನೆಲೆಯಲ್ಲಿ ಗಾಂಧಿ ಜಯಂತಿಯಂದು ಶಿರಸಿಯಲ್ಲಿ ಅರಣ್ಯವಾಸಿಗಳಿಂದ ಜರಗುತ್ತಿರುವ ಮೆರವಣಿಗೆ ಮತ್ತು ಸಭಾಧ್ಯಕ್ಷರ ಮನೆ ಮುಂದೆ ಧರಣಿಯ ಸಂದರ್ಭದಲ್ಲಿ ಸರಕಾರದ ಸ್ಪಷ್ಟ ನಿಲುವನ್ನ ಪ್ರಕಟಿಸುವಂತೆ ಸಭಾಧ್ಯಕ್ಷರಲ್ಲಿ ವಿನಂತಿಸಲಾಗುತ್ತಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ರಾಜ್ಯ ಸರಕಾರ ಸುಫ್ರೀಂ ಕೋರ್ಟನಲ್ಲಿ ತಿರಸ್ಕಾರವಾಗಿರುವ ಅರಣ್ಯವಾಸಿಗಳನ್ನ ಹಂತಹಂತವಾಗಿ ಒಕ್ಕಲೆಬ್ಬಿಸುವುದಾಗಿ ಪ್ರಮಾಣ ಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಆತಂಕದಲ್ಲಿರುವ ಅರಣ್ಯವಾಸಿಗಳಿಗೆ ಭೂಮಿ ಹಕ್ಕಿಗೆ ಸಂಬಂಧಿಸಿ ಭದ್ರತೆ ಅವಶ್ಯವಿರುವುದರಿಂದ ಸಭಾಧ್ಯಕ್ಷರ ಮನೆ ಮುಂದೆ ಧರಣಿ ಕಾರ್ಯಕ್ರಮದ ಸಂದರ್ಭದಲ್ಲಿ ಸರಕಾರದ ನಿಲುವನ್ನು ಪ್ರಕಟಿಸಲು ಅವರು ಕೋರಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಕಾಗೋಡ ಅವರಿಂದ ಉದ್ಘಾಟನೆ: ಗಾಂಧಿ ಜಯಂತಿಯಂದು ಹಮ್ಮಿಕೊಳ್ಳಲಾದ ಮೆರವಣಿಗೆ ಉದ್ಘಾಟನೆಯನ್ನ ಕಾಗೋಡ ತಿಮ್ಮಪ್ಪ ಅವರು ಬಿಡ್ಕಿಬೈಲಿನಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಲಿದ್ದಾರೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.