ಸಿದ್ದಾಪುರ: ತಾಲೂಕಿನ ಸ್ವ-ಸಹಾಯ ಸಂಘ ಹಾಗೂ ಸ್ತ್ರೀಶಕ್ತಿ ಸಂಘಗಳ ವ್ಯವಹಾರದಲ್ಲಿ ಆಗಿರುವ ಅವ್ಯವಹಾರಗಳ ಸಮಗ್ರ ತನಿಖೆಯನ್ನು ನಡೆಸುವಂತೆ ಕ್ರಮಕೈಗೊಳ್ಳಲು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ ಅವರಲ್ಲಿ ಕಾಂಗ್ರೆಸ್ ಪ್ರಮುಖರು ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಕೆ.ಪಿ.ಸಿ.ಸಿ ಹಿಂದುಳಿದ ವರ್ಗದ ರಾಜ್ಯ ಉಪಾಧ್ಯಕ್ಷರಾದ ವಿ. ಎನ್. ನಾಯ್ಕ ಬೇಡ್ಕಣಿ ಅವರ ನೇತೃತ್ವದಲ್ಲಿ ತಾ. ಪಂ. ಸದಸ್ಯರಾದ ನಾಶಿರ್ ವಲ್ಲಿ ಖಾನ್ ಹಾಗೂ ಇತರರು ಭೇಟಿಯಾಗಿ ವಿನಂತಿಸಿಕೊಂಡಿದ್ದಾರೆ. ಈ ಕುರಿತು ಯೋಗ್ಯ ಪರಿಶೀಲನೆ ಹಾಗೂ ತನಿಖೆ ಯೊಂದಿಗೆ ಕ್ರಮ ಕೈಗೊಂಡು ನ್ಯಾಯ ವದಗಿಸಲು ಆಗ್ರಹಿಸಲಾಗಿದೆ.
ಗ್ರಾಮೀಣ ಕಲಾವಿದರ ಮೂಲಕ ಸರಕಾರದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪ್ರಚಾರ ನೀಡಲು ಅವಕಾಶ ವಂಚನೆ ಮಾಡಿದ ಕುರಿತು ಮನವಿ ಮಾಡಿಕೊಂಡಿದ್ದಾರೆ. ತಾಲೂಕಿನ ಅಭಿವೃದ್ಧಿಯ ಕುರಿತು ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಹಾಗೂ ಮಾಜಿ ರಾಜ್ಯ ಪಾಲರಾದ ಮಾರ್ಗರೆಟ್ ಆಳ್ವಾ ಭೇಟಿಯಾಗಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಡಿ.ಸಿ.ಸಿ ಕಾರ್ಯದರ್ಶಿ ಸಾವೇರ್ ಡಿ’ಸೀಲ್ವಾ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎಮ್.ಟಿ.ಗೌಡ ಕಿಲವಳ್ಳಿ,ಕಾಂಗ್ರೆಸ್ ಹಿಂದುಳಿದ ವರ್ಗದ ತಾಲೂಕ ಅಧ್ಯಕ್ಷ ಗಂಗಾಧರ ಮಡಿವಾಳ ಕಡಕೇರಿ, ತಾಲೂಕಾ ಇಂಟೆಕ್ ಅಧ್ಯಕ್ಷರಾದ ರಾಮಕೃಷ್ಣ ನಾಯ್ಕ ಶಿರೂರು, ತಾಲೂಕಾ ಕಾಂಗ್ರೆಸ್ ಸದಸ್ಯರಾದ ಲಂಭೋದರ ಹೆಗಡೆ ಹಾಗೂ ಮಂಜುನಾಥ ನಾಯ್ಕ ಬೇಗಾರ್ ಮೊದಲಾದವರಿದ್ದರು.