ಅಂಕೋಲಾ: ರೋಟರಿ ಕ್ಲಬ್, ಪಿ.ಎಂ.ಹೈಸ್ಕೂಲ್ ಎನ್ಸಿಸಿ ಘಟಕ (ಆರ್ಮಿ ವಿಂಗ್), ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ, ಹಟ್ಟಿಕೇರಿ ಜೇಸೀ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದೊಂದಿಗೆ ಅಂತರರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ತಾಲೂಕಿನ ನದೀಬಾಗ ಕಡಲತೀರದಲ್ಲಿ ಸ್ವಚ್ಛ ಸಾಗರ ಸುರಕ್ಷಿತ ಸಾಗರ ಕಾರ್ಯಕ್ರಮ ನಡೆಯಿತು.
ರೋಟರಿ ಕ್ಲಬ್ ಅಧ್ಯಕ್ಷೆ ಡಾ.ಗೀತಾ ನಾಯಕ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ಲಯನ್ಸ್ ಕ್ಲಬ್ ಕರಾವಳಿ ಅಧ್ಯಕ್ಷ ಗಣೇಶ ಶೆಟ್ಟಿ, ಜೇಸಿ ಆಂಗ್ಲ ಮಾದ್ಯಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಂಗಲದಾಸ ಕಾಮತ, ಪಿಎಂ ಹೈಸ್ಕೂಲ್ ಎನ್ಸಿಸಿ ಘಟಕದ ಕಮಾಂಡರ್ ಜಿ.ಆರ್.ತಾಂಡೇಲ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಪಿ.ಎಂ.ಹೈಸ್ಕೂಲ ಆವರಣದಲ್ಲಿ ಎನ್ಸಿಸಿ ಕೆಡೆಟ್ಗಳೊಂದಿಗೆ ಜಾಥಾ ಹೊರಟು, ನದೀಭಾಗ ಕಡಲತೀರದಲ್ಲಿ ಸ್ವಚ್ಛತೆ ಕೈಗೊಳ್ಳಲಾಯಿತು.
ರಾಜ್ಯ ವಿಜ್ಞಾನ ಪರಿಷತ ಜಿಲ್ಲಾ ಸಮಿತಿ ಅಧ್ಯಕ್ಷ ಡಾ.ವಿ.ಎನ್.ನಾಯಕ ಈ ಸಂದರ್ಭದಲ್ಲಿ ಮಾತನಾಡಿ, ಸ್ವಚ್ಛತೆಯ ಮಹತ್ವ ತಿಳಿಸಿದರು. ಪ್ಲಾಸ್ಟಿಕನಿಂದಾಗುವ ಅಪಾಯಗಳನ್ನಿ ತಿಳಿಸುವುದರ ಮೂಲಕ ಪ್ಲಾಸ್ಟಿಕ ನಿಷೇಧ ಮಾಡುವುದನ್ನು ನಾವೆಲ್ಲರು ಚಾಚೂ ತಪ್ಪದೆ ಪಾಲಿಸಿ ಪರಿಸರ ಉಳಿವಿಗೆ ಕೈ ಜೋಡಿಸಬೇಕೆಂದರು.
ಪ್ರಮುಖರಾದ ಶಂಕರ ಹುಲಸ್ವಾರ, ಕೃಷ್ಣ ಪ್ರಭು, ರಾಜೇಂದ್ರ ಶೆಟ್ಟಿ, ವಸಂತ ಕೆ ನಾಯ್ಕ, ಸತ್ಯಾನಂದ ನಾಯಕ, ಪ್ರವೀಣ ಹೆಗಡೆ, ಸತೀಶ ಮಹಾಲೆ, ಹಸನ ಶೇಖ್, ಸಂಜಯ ಲೋಕಪಾಲ, ರಾಘು ಕಾಕರಮಠ, ಅಕ್ಷಯ ನಾಯ್ಕ, ನಾಗರಾಜ ಜಾಂಬಳೇಕರ, ಅಭಯ ಮರಬಳ್ಳಿ, ಬೊಬ್ರುವಾಡ ಗ್ರಾ.ಪಂ.ಸದಸ್ಯ ಚಂದ್ರಕಾಂತ ನಾಯ್ಕ, ಪುರಸಭಾ ಸದಸ್ಯ ನಾಗರಾಜ ಐಗಳ, ಚಂದ್ರಪ್ರಭಾ, ರಾಘವೇಂದ್ರ ಮಹಾಲೆ ಜೇಸೀ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.