ಸಿದ್ದಾಪುರ; ಸಮಾಜದಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಸಂಘಟನಾತ್ಮಕವಾಗಿ ಶ್ರಮಿಸಿದಲ್ಲಿ ಖಂಡಿತವಾಗಿಯೂ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾ ದೈವಜ್ಞ ವಾಹಿನಿ ಅಧ್ಯಕ್ಷ ಶಿರಸಿಯ ಸುಧಾಕರ್ ಶೇಟ್ ಹೇಳಿದರು.
ಅವರು ಉತ್ತರ ಕನ್ನಡ ಜಿಲ್ಲಾ ದೈವಜ್ಞ ವಾಹಿನಿ ಮತ್ತು ಮಾತ್ರ ವಾಹಿನಿಯ ಕಾರ್ಯಕಾರಿ ಮಂಡಳಿಯವರೊಂದಿಗೆ ಪಟ್ಟಣದ ಶ್ರೀ ಲಕ್ಷ್ಮೀನಾರಾಯಣ ದೇವಾಲಯಕ್ಕೆ ಭೇಟಿನೀಡಿದ ಸಂದರ್ಭದಲ್ಲಿ ಮಾತನಾಡಿ ಅಕ್ಟೋಬರ್ 10 ನೇ ತಾರೀಕು ಭಾನುವಾರದಂದು ಶ್ರೀ ಕ್ಷೇತ್ರ ಕರ್ಕಿ ಮಠದಲ್ಲಿ ನಡೆಯುವ ಜಿಲ್ಲಾ ವಾಹಿನಿ ಉದ್ಘಾಟನಾ ಸಮಾರಂಭವು ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ನಡೆಯಲಿದೆ. ತಾವೆಲ್ಲರೂ ಭಾಗಿಯಾಗಬೇಕೆಂದು ಆಮಂತ್ರಿಸಿದರು.
ಜಿಲ್ಲಾ ಮಾತ್ರ ವಾಹಿನಿಯ ಅಧ್ಯಕ್ಷೆ ಶಿರಸಿಯ ಸಂಧ್ಯಾ ಕುರ್ಡೇಕರ್ ಮಾತನಾಡಿ ಜಿಲ್ಲಾ ವಾಹಿನಿ ಮತ್ತು ಮಾತ್ರ ವಾಹಿನಿಯ ಧ್ಯೇಯೋದ್ದೇಶಗಳನ್ನು ನೀಡುತ್ತಾ ನಾವೆಲ್ಲರೂ ಒಂದಾಗಿ ದುಡಿದು ಸಮಾಜವನ್ನು ಅಭಿವೃದ್ಧಿ ಮಾಡಬೇಕೆಂದರು. ಜಿಲ್ಲಾ ವಾಹಿನಿಯ ಸಂಚಾಲಕ ಸುರೇಶ್ ಅರ್.ರಾಯ್ಕರ್ ಮಾತನಾಡಿ ಸಮಾಜದ ಬಡಕುಟುಂಬಕ್ಕೆ ಸಹಾಯಹಸ್ತ ನೀಡುವುದು,ಯುವಕ-ಯುವತಿಯರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವ ಯೋಜನೆಗೆ ಮಾರ್ಗದರ್ಶನ ನೀಡಿ ಸಹಾಯ ಮಾಡುವ ಗುರಿ ನಮ್ಮ ವಾಹಿನಿಯ ಉದ್ದೇಶವಾಗಿದೆ ಎಂದರು.
ಜಿಲ್ಲಾ ವಾಹಿನಿಯ ಸಲಹಾ ಗೌರವ ಸದಸ್ಯ ಶಿರೀಶ ವಿ. ಬೆಟಗೇರಿ,ವಾಹಿನಿಯ ನಿರ್ದೇಶಕ ರಾಮದಾಸ್ ಎಂ. ರಾಯ್ಕರ್, ಮಾತ್ರ ವಾಹಿನಿಯ ಕಾರ್ಯದರ್ಶಿ ವಿಜಯ ಆರ್.ರಾಯ್ಕರ್,ಸಮಾಜದ ಅಧ್ಯಕ್ಷ ಶಾಂತರಾಮ ವಿ.ಶೇಟ್, ಮುರುಡೇಶ್ವರದ ರಾಮದಾಸ್ ಎನ್.ಶೇಟ್,ಸಮಾಜದ ಹಿರಿಯರಾದ ಡಿ.ಎನ್.ಶೇಟ್,ರಮೇಶ್ ಜಿ.ಶೇಟ್, ಚಂದ್ರಹಾಸ್ ಜಿ.ಶೇಟ್,ಉಪಸ್ಥಿತರಿದ್ದರು . ಸಿರಸಿಯ ಸೋಮ ಪ್ರಕಾಶ್ ಎಸ್.ಶೇಟ್ ಪ್ರಾಸ್ತವಿಕ ಮಾತನಾಡಿದರು .ಯುವಕ ಸಂಘದ ಅಧ್ಯಕ್ಷ ಪ್ರಶಾಂತ ಡಿ.ಶೇಟ್ ಸ್ವಾಗತಿಸಿ ವಂದಿಸಿದರು.