ಅಂಕೋಲಾ: ಕೆ.ಎಲ್ ಸಂಸ್ಥೆ ಶಿಕ್ಷಣ ಮಹಾವಿದ್ಯಾಲಯ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಜೋಗುಳ ಇವರ ಸಹಯೋಗದಲ್ಲಿ ವಿಶ್ವ ಓಜೋನ್ ದಿನದ ಕುರಿತು ಜಾಗೃತಿ ನಾಟಕ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮುಖ್ಯೋಪಾಧ್ಯಾಪಕರಾದ ಶ್ರೀಮತಿ ಚಂದ್ರಬಾಗಿ ನಾಯಕ ಭಾಗವಹಿಸಿ ಮಾತನಾಡುತ್ತಾ ಓಝೋನ್ ಭೂಮಿಯ ಜೀವ ರಕ್ಷಕ ಪದರವಾಗಿದ್ದು ಇದರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಆದ್ದರಿಂದ ಧಕ್ಕೆ ಆಗಬಹುದಾದ ಅನಿಲಗಳ ಬಳಕೆಯನ್ನು ಕಡಿಮೆ ಮಾಡಿ ಮುಂದಿನ ಪೀಳಿಗೆಗೆ ಕೊಡುಗೆ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪನ್ಯಾಸಕ ಮಂಜುನಾಥ ಇಟಗಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳ ಮೂಲಕ ಓಝೋನ್ ಜಾಗೃತಿ ನಾಟಕ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಚಂದನಾ ನಾಯಕ ಪ್ರಾರ್ಥಿಸಿದರು ನಾಗಶ್ರೀ ನಾಯಕ ಸ್ವಾಗತಿಸಿದರು. ವರ್ಷ ಆಚಾರಿ ಅನಿಸಿಕೆ ವ್ಯಕ್ತಪಡಿಸಿದ್ದರು ಜಯಲಕ್ಷ್ಮಿ ವಂದಿಸಿದರು .ರಕ್ಷಾ ಹೊಸಮನೆ ನಿರೂಪಿಸಿದರು ವೇದಿಕೆಯಲ್ಲಿ ವಿಶಾಲ ಷಡಗೆರಿ ಉಪಸ್ಥಿತರಿದ್ದರು ಶಾಲಾ ಶಿಕ್ಷಕರು ಸಹಕರಿಸಿದರು.