ಶಿರಸಿ: ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಛೇರಿಯಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಅರಣ್ಯ ಮತ್ತು ವನ್ಯ ಜೀವಿ ಕಾಯ್ದೆ ಹಾಗೂ ಕಾನೂನು ಕುರಿತು ಅರಿವು ಕಾರ್ಯಾಗಾರವನ್ನು ಅರಣ್ಯ ಇಲಾಖೆಯ ಮತ್ತು ಎಂಇಎಸ್ ಕಾನೂನು ಮಹಾವಿದ್ಯಾಲದಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಎಂಇಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಶೋಕ ಭಟ್ಕಳ ಅವರು ಅರಣ್ಯ ಇಲಾಖೆ ಅಧಿಕಾರಿಗಳು ಸ್ವಾಗತಿಸುತ್ತಾ ಪ್ರಸ್ತಾವಿಕವಾಗಿ ಮಾತನಾಡಿ ವೃತ್ತಿ ನೈಪುಣ್ಯತೆಯ ವಿಚಾರವಾಗಿ ವಿವಿಧ ಇಲಾಖೆಯಿಂದ ಕಾನೂನು ಸಂಬಂಧಿಸಿದ ಮಾಹಿತಿ ಸಂಗ್ರಹಿಸಿ ಅವರ ವೃತ್ತಿಗೆ ಅನುಕೂಲ ಆಗುವಂತೆ ಮಾಡಲಾಗುತ್ತದೆ ಅದೇ ರೀತಿ ಇಂದು ಅರಣ್ಯ ಇಲಾಖೆಯಿಂದ ಮಾಹಿತಿ ಪಡೆಯಲು ಬಂದಿದ್ದೆವೆ ಮಾಹಿತಿ ನೀಡಲಿರುವ ಎಲ್ಲರಿಗೂ ಧನ್ಯವಾದಗಳು ಸಲ್ಲಿಸುತ್ತೆವೆ ಎಂದರು.
ನಂತರ ಡಾ. ಅಜ್ಜಯ್ಯ ಜಿ. ಆರ್ (ಡಿ. ಸಿ.ಎಫ್), ರಘು ಡಿ. (ಎ. ಸಿ. ಎಫ್) ಮತ್ತು ಶಿವಾನಂದ ಲಿಂಗಾಣಿ (ಆರ್ ಎಫ್ ಓ) ಅವರು ಪಶ್ಚಿಮ ಘಟ್ಟಗಳ ಜೀವ ವೈವಿಧ್ಯ ಕಾಯ್ದೆ, ಕರ್ನಾಟಕ ಅರಣ್ಯ ಕಾಯ್ದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆಗಳು ವಿವರವಾಗಿ ಉಪನ್ಯಾಸ ನೀಡಿದರು ನಂತರ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಕಾರ್ಯಕ್ರಮದಲ್ಲಿ ಡಾ! ಅಜ್ಜಯ್ಯ ಜಿ. ಆರ್ (ಡಿ. ಸಿ.ಎಫ್), ರಘು ಡಿ. (ಎ. ಸಿ. ಎಫ್), ಅಶೋಕ ಅಲಗೂರ (ಎ. ಸಿ ಎಫ್),
ಕಾನೂನು ಮಹಾವಿದ್ಯಾಲಯ ಪ್ರಾಂಶುಪಾಲರಾದ ಡಾ! ಅಶೋಕ ಭಟ್ಕಳ, ಶಿವಾನಂದ ನಿಂಗಾಣಿ (ಆರ್ ಎಫ್ ಓ), ಉಷಾ ಕಬ್ಬೇರ್ (ಆರ್ ಎಫ್ ಓ), ವರದ ರಂಗನಾಥ (ಅರ್ ಎಫ್ ಓ), ಉಪ ವಲಯ ಅರಣ್ಯಾಧಿಕಾರಿಗಳಾದ ಅಕ್ಷತಾ ವಿಜಾಪುರ ಹಾಗೂ ಎಮ್. ಡಿ. ಸಲ್ಮಾನ್ ಅಸ್ಗರ್, ಸಿಬ್ಬಂದಿಗಳು ಮತ್ತು ಎಂ ಇ ಎಸ್ ಕಾನೂನು ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.