ಶಿರಸಿ: 2022-23ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಸಾಧನೆಗೈದಿದ್ದಾರೆ.
ಸೆ. 15 ಗುರುವಾರದಂದು ನೀಲೆಕಣಿ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಶಿರಸಿ ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಲಯನ್ಸ್ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದು, 19 ಸ್ಪರ್ಧೆಯಲ್ಲಿ ಮೇಲುಗೈ ಸಾಧಿಸಿದ್ದಾರೆ. ಸೃಷ್ಠಿ ಗೌಳಿ ಕನ್ನಡ ಭಾಷಣ (ಆಜಾದಿ ಕಾ ಅಮೃತ ಮಹೋತ್ಸವ) ಪ್ರಥಮ, ದಿಶಾ ಹೆಗಡೆ ಸಂಸ್ಕೃತ ಭಾಷಣ ಪ್ರಥಮ, ಸ್ಪೂರ್ತಿ ಎಸ್. ಹೆಗಡೆ ಸಂಸ್ಕೃತ ಧಾರ್ಮಿಕ ಪಠಣ ಪ್ರಥಮ, ಭುವನಾ ಹೆಗಡೆ ಭರತನಾಟ್ಯ ಪ್ರಥಮ, ವಿಭವ ಭಾಗ್ವತ್ ಮಿಮಿಕ್ರಿ ಪ್ರಥಮ, ಅಯನಾ ವಾಯ್. ಗಝಲ್ ಪ್ರಥಮ, ಶೃದ್ಧಾ ವಿಠ್ಠಲಕರ ಹಾಸ್ಯ ಪ್ರಥಮ, ಸ್ತುತಿ ತುಂಬಾಡಿ ಮತ್ತು ವಿನೀತ ಭಟ್ ಕ್ವಿಜ್ ಪ್ರಥಮ, ವಾಸವಿ ಜೋಶಿ ಸಂಗಡಿಗರು (ಅನನ್ಯಾ ಹೆಗಡೆ, ತೈಬಾ, ಶ್ರೇಯಾ ಬಡಿಗೇರ, ಪ್ರಾರ್ಥನಾ ಪ್ರಸನ್ನ ಹೆಗಡೆ, ಸ್ಪೂರ್ತಿ ಜಿ.) ಜಾನಪದ ನೃತ್ಯ ಪ್ರಥಮ ಸ್ಥಾನವನ್ನು ಪಡೆದು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ರಕ್ಷಾ ಕಾಮತ್ ಹಿಂದಿ ಭಾಷಣ ದ್ವಿತೀಯ, ಸಮ್ರಾ ಅರೇಬಿಕ್ ಧಾರ್ಮಿಕ ಪಠಣ ದ್ವಿತೀಯ, ಸುವಿಧಾ ಹೆಗಡೆ ಜಾನಪದ ಗೀತೆ ದ್ವಿತೀಯ, ಸಹನಾ ಶೆಟ್ಟಿ ಭಾವಗೀತೆ ದ್ವಿತೀಯ, ಸಿಂಚನಾ ರಾಯ್ಕರ ಛದ್ಮವೇಷ ದ್ವಿತೀಯ, ಇಶಾ ಪಟವರ್ಧನ ಚರ್ಚಾಸ್ಪರ್ಧೆ ದ್ವಿತೀಯ, ಸ್ತುತಿ ತುಂಬಾಡಿ ರಾ.ಶಿ.ನಿಯಲ್ಲಿ ಕೌಶಲ್ಯಾಭಿವೃದ್ಧಿ ಭಾಷಣದಲ್ಲಿ ದ್ವಿತೀಯ, ಸೃಷ್ಠಿ ಸಂಗಡಿಗರು (ರಿಶಿಕಾ, ವಂದನಾ, ಸಮ್ರಾ, ಪೂರ್ವಿ, ಮಿಸ್ಬಾ) ಕವ್ವಾಲಿ ದ್ವಿತೀಯ, ಕ್ಷಿತಿ ಹೆಗಡೆ ಇಂಗ್ಲೀಷ್ ಭಾಷಣ ತೃತೀಯ, ಸೋನಿಕಾ ರಂಗೋಲಿ ತೃತೀಯ ಸ್ಥಾನವನ್ನು ಪಡೆದು ಒಟ್ಟೂ 20 ಸ್ಪರ್ಧೆಯಲ್ಲಿ 19 ಸ್ಪರ್ಧೆಯಲ್ಲಿ ವಿಜೇತರಾಗಿ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸುವದರೊಂದಿಗೆ ಶಾಲೆಯ ಕೀರ್ತಿಯನ್ನು ಹೆಚ್ಚಿಸಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ಪ್ರೌಢ ಶಾಲಾ ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕರು ಮಾರ್ಗದರ್ಶನ ನೀಡಿರುತ್ತಾರೆ. ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆಗೆ, ಸಹಕರಿಸಿದ ಎಲ್ಲ ಪಾಲಕ ವೃಂದಕ್ಕೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ ಹೆಗಡೆ, ಶಿಕ್ಷಕ-ಶಿಕ್ಷಕೇತರ ಬಾಂಧವರು, ಶಿರಸಿ ಲಯನ್ಸ್ ಕ್ಲಬ್ ಬಳಗ ಮತ್ತು ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿನಂದಿಸುವದರೊಂದಿಗೆ ವಿದ್ಯಾರ್ಥಿಗಳು ತಾಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿಯೂ ಪ್ರಶಸ್ತಿಗಳಿಸಿ ಬರಲೆಂದು ಶುಭ ಹಾರೈಸಿದ್ದಾರೆ.