ಶಿರಸಿ: ನಗರದ ತೋಟಗಾರರ ಕಲ್ಯಾಣ ಸಂಘ (ರಿ) ಶಿರಸಿ ಇದರ 41ನೇ ವಾರ್ಷಿಕ ಸರ್ವಸಾಧಾರಣ ಸಭೆಯು ಕಡವೆ ಶ್ರೀಪಾದ ಹೆಗಡೆ ಕಲ್ಯಾಣ ಮಂಟಪದಲ್ಲಿ ಸೆ.13 ರಂದು ಸಂಘದ ಅಧ್ಯಕ್ಷ ಎಂ.ಪಿ. ಹೆಗಡೆ ಬಪ್ಪನಳ್ಳಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ 2022-23 ರಿಂದ 2026-27 ರ ಐದು ವರ್ಷದ ಅವಧಿಗೆ ಆಯ್ಕೆಯಾದ ನೂತನ ಸದಸ್ಯರ ಹೆಸರನ್ನು ಚುನಾವಣಾಧಿಕಾರಿಗಳು ಪ್ರಕಟಿಸಿದರು. ಸಭೆಯಲ್ಲಿ ಸಂಘದ ಕಾರ್ಯಚಟುವಟಿಕೆಯ ಕುರಿತು ಸರ್ವಸದಸ್ಯರು ಶ್ಲಾಘನೆ ವ್ಯಕ್ತಪಡಿಸಿದರು.
ನಂತರ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷರಾಗಿ ಎಂ.ಪಿ. ಹೆಗಡೆ ಬಪ್ಪನಳ್ಳಿ,ಉಪಾಧ್ಯಕ್ಷರಾಗಿ ಎಮ್.ವಿ. ಜೋಶಿ ಕಾನಮೂಲೆ,ಖಜಾಂಚಿಯಾಗಿ ಲೋಕೇಶ ಹೆಗಡೆ ಹುಲೇಮಳಗಿ, ಗೌರವ ಕಾರ್ಯದರ್ಶಿಯಾಗಿ ಎಸ್.ಎಂ. ಹೆಗಡೆ ಮಾನಿಮನೆ, ಸಹಕಾರ್ಯದರ್ಶಿಯಾಗಿ ಎಲ್.ಎಮ್. ಹೆಗಡೆ ಗೋಳಿಕೊಪ್ಪ ಇವರನ್ನು ಆಯ್ಕೆ ಮಾಡಲಾಯಿತು.
ಆಡಳಿತ ಮಂಡಳಿಯ ನಿರ್ದೇಶಕರಾಗಿ ವಿಶ್ವೇಶ್ವರ ಸುಬ್ರಾಯ ಹೆಗಡೆ ಊರತೋಟ, ನಾಗೇಶ ದತ್ತಾತ್ರಯ ಹೆಗಡೆ, ಹಾಲೇರಿಕೊಪ್ಪ, ಕಮಲಾಕರ ಮಹಾಬಲೇಶ್ವರ ಹೆಗಡೆ ಚವತ್ತಿ, ಭಾಸ್ಕರ ಗಣಪತಿ ಹೆಗಡೆ ಕಾಗೇರಿ, ನಾಗರಾಜ ಮಹಾದೇವ ಹೆಗಡೆ ಸಹ್ಯಾದ್ರಿ ಕಾಲೋನಿ, ಅಶೋಕ ಹೆಗಡೆ ಹಿರೇಕೈ ಇವರುಗಳನ್ನು ಆಯ್ಕೆ ಮಾಡಲಾಯಿತು.
ಸುಬ್ರಾಯ ಜಿ. ಹೆಗಡೆ, ಊರತೋಟ, ಈಶ್ವರ ಎಂ. ಹೆಗಡೆ, ಶಿರಸಿ, ದೀಪಕ ಹೆಗಡೆ ದೊಡ್ಡೂರು, ಶಂಕರನಾರಾಯಣ ಡಿ. ಭಟ್ಟ, ಶಿರಸಿ, ಸುರೇಶ ಗೋಪಾಲ ಹೆಗಡೆ ಕೋವೇಸರ ಇವರನ್ನು ಆಮಂತ್ರಿತರಾಗಿ ನಿಯುಕ್ತಿಗೊಳಿಸಲಾಯಿತು.