ಸಿದ್ದಾಪುರ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಹಲವೆಡೆ ಅವಾಂತರ ಸೃಷ್ಟಿಮಾಡಿದೆ. ತಾಲೂಕಿನ ಕ್ಯಾದಗಿಯಲ್ಲಿ ಭಾರಿ ಗಾಳಿ ಮಳೆಗೆ ಮನೆಯ ಗೋಡೆ ಕುಸಿದು ಯುವಕ ಮೃತ ಪಟ್ಟ ಘಟನೆ ನಡೆದಿದೆ. ಚಂದ್ರಶೇಖರ ನಾರಾಯಣ ಹಸ್ಲರ ( 21) ಎಂಬಾತ ವ್ಯಕ್ತಿಯಾಗಿದ್ದು, ರವಿವಾರ ರಾತ್ರಿ ಸುರಿದ ಗಾಳಿ ಮಳೆಗೆ ಮನೆಯ ಗೋಡೆ ಕುಸಿದು ಬಿದ್ದು ದುರ್ಘಟನೆ ಸಂಭವಿಸಿದೆ.
ಮನೆ ಕುಸಿದ ವೇಳೆ ಗೋಡೆ ಅಡಿ ಸಿಲುಕಿದ್ದವನನ್ನು ಹೊರತೆಗೆದು ಸರಕಾರಿ ಆಸ್ಪತ್ರೆ ಸಿದ್ದಾಪುರಕ್ಕೆ ಚಿಕಿತ್ಸೆಗೆ ಕರೆತಂದು ವೈದ್ಯರ ಸಲಹೆ ಮೇರೆಗೆ ಶಿವಮೊಗ್ಗಾ ಮೆಗ್ಗನ್ ಆಸ್ಪತ್ರೆಯಿಂದ ಮಂಗಳೂರಿಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಮೃತ ಪಟ್ಟಿರುವವುದಾಗಿ ತಿಳಿದು ಬಂದಿದೆ.