ಶಿರಸಿ: ತಾಲೂಕಿನ ಅಂಬ್ಲಿಹೊಂಡದ ಹೇಮಂತ ಹೆಗಡೆ ಮಂಡಿಸಿದ ಮಹಾ ಪ್ರಬಂಧಕ್ಕೆ ದೇಶದ ಪ್ರತಿಷ್ಠಿತ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಪಿಎಚ್ ಡಿ ಪ್ರದಾನ ಮಾಡಿದೆ.
ಹೇಮಂತ ಹೆಗಡೆ ಅವರು ಮಂಡಿಸಿದ ” ಡಿಸೈನ್ ಅಂಡ್ ಡೆವಲಪಮೆಂಟ್ ಆಫ್ ಲೋಕಲೈಸ್ಡ ಸರ್ಪೇಸ್ ರಿಸೊಸೆನ್ಸ ಸೆನ್ಸರ್ ಬೇಸ್ಡ ಆನ್ ಪ್ಲಾಸ್ಮೊನಿಕ್ ನಾನೊಸ್ಟ್ರಕ್ಷರ್ ಎಂಬ ಮಹಾ ಪ್ರಬಂಧವನ್ನು ಮಾಹೆಯಿಂದ ಬೆಳ್ಳಿ ಮತ್ತು ಬಂಗಾರದ ನ್ಯಾನೊ ಕಣಗಳ ಅನ್ವಯದ ಕುರಿತು ಐದು ವರ್ಷಗಳ ಕಾಲ ಸಂಶೋಧನೆ ಮಾಡಿ ಮಂಡಿಸಿದ್ದಾರೆ. ಐದು ಸಂಶೋಧನಾ ಲೇಖನಗಳನ್ನು ಅಂತರಾಷ್ಟ್ರೀಯ ಸಂಶೋಧನಾ ಪತ್ರಿಕೆಗಳಲ್ಲಿ ಕೂಡ ಪ್ರಕಟಿಸಿದ್ದಾರೆ ಎಂಬುದು ಉಲ್ಲೇಖನೀಯ.
ಅಂಬ್ಲಿಹೊಂಡದ ಶ್ರೀದಯಾ ಮತ್ತು ರಮಾಕಾಂತ ಹೆಗಡೆ ದಂಪತಿ ಪುತ್ರ.