ಶಿರಸಿ: ದೊಡ್ನಳ್ಳಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಪ್ರತಿಭಾ ಕಾರಂಜಿಯಲ್ಲಿ ನಮ್ಮ ಮಿಯಾರ್ಡ್ಸ್ ಚಂದನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಕಿರಿಯ ಮತ್ತು ಹಿರಿಯ ವಿಭಾಗದಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕಿರಿಯರ ವಿಭಾಗ: 2ನೇ ವರ್ಗದ ಪರಿಣಿತಾ ಜಿ ಭಟ್ ( ಲಘು ಸಂಗೀತ) , 4 ನೇ ವರ್ಗದ ನಾಗಾಂಕಿತ ಆರ್ ವಿ( ಕಥೆ ಹೇಳುವುದು), 4ನೇ ವರ್ಗದ ಮನು ( ಚಿತ್ರ ಕಲೆ- ಬಣ್ಣ ಹಚ್ಚುವಿಕೆ),4 ನೇ ವರ್ಗದ ಆರಾಧ್ಯಾ ಹೆಗಡೆ( ಅಭಿನಯ ಗೀತೆ), 4ನೇ ವರ್ಗದ ಪೂಜಾ ಭಟ್( ಭಕ್ತಿ ಗೀತೆ) ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. 4ನೇ ವರ್ಗದ ಗ್ರೀಷ್ಮಾ ಭಟ್( ಇಂಗ್ಲಿಷ್ ಕಂಠಪಾಠ), 2ನೇ ವರ್ಗದ ಪರ್ಣಿಕಾ( ಸಂಸ್ಕ್ರತ ಧಾರ್ಮಿಕ ಪಠಣ) ಸ್ಪರ್ಧೆಗಳಲ್ಲಿದ್ವಿತೀಯ ಸ್ಥಾನ ಪಡೆದಿದ್ದಾರೆ.
ಹಿರಿಯ ವಿಭಾಗ:5ನೇ ವರ್ಗದ ಪ್ರತೀಕ ಹೆಗಡೆ( ಕನ್ನಡ ಕಂಠಪಾಠ) ,6 ನೇ ವರ್ಗದ ದೀಕ್ಷಾ ಪಿ ಹೆಗಡೆ(ಇಂಗ್ಲಿಷ್ ಕಂಠಪಾಠ), 7ನೇ ವರ್ಗದ ಪ್ರಾರ್ಥನಾ ಜಿ ಭಟ್( ಹಿಂದಿ ಕಂಠಪಾಠ, ಲಘು ಸಂಗೀತ), 6ನೇ ವರ್ಗದ ವರ್ಷಿಣಿ ಎಸ್ ಹೆಗಡೆ( ಸಂಸ್ಕೃತ ಧಾರ್ಮಿಕ ಪಠಣ), 7ನೇ ವರ್ಗದ ಧನಶ್ರೀ ಬಾಕಳೆ ( ಛದ್ಮ ವೇಷ) , 6ನೇ ವರ್ಗದ ಅನ್ವಿತಾ ಆರ್ ವಿ( ಕಥೆ ಹೇಳುವುದು, ಭಾಷಣ ಸ್ಪರ್ಧೆ) ,7 ನೇ ವರ್ಗದ ವಿಕಾಸ್ ಪಾಟೀಲ್ ( ಚಿತ್ರಕಲೆ- ಬಣ್ಣ ಹಚ್ಚುವುದು) ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 6ನೇ ವರ್ಗದ ಅರ್ಜುನ್ ಸಕಲಾತಿ (ಕ್ಲೇ ಮಾಡಲೆಂಗ್), 7ನೇ ವರ್ಗದ ಪೂರ್ವಿ ಹೆಗಡೆ( ಭಕ್ತಿ ಗೀತೆ), 7 ನೇ ವರ್ಗದ ಅನಿರುದ್ಧ ಭಟ್ ( ಆಶು-ಭಾಷಣ),7ನೇ ವರ್ಗದ ಸಾತ್ವಿಕ್ ಹೆಗಡೆ (ಹಾಸ್ಯ) ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 7ನೇ ವರ್ಗದ ಬಿ ಬಿ ಫಾತಿಮಾ ( ಅರೇಬಿಕ್ ಧಾರ್ಮಿಕ ಪಠಣ ), 5 ನೇ ವರ್ಗದ ಸಾನಿಕಾ ಪಿ ಹೆಗಡೆ (ಅಭಿನಯ ಗೀತೆ) ಸ್ಪರ್ಧೆಗಳಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.