Slide
Slide
Slide
previous arrow
next arrow

ಸಾರ್ವಜನಿಕ ಗಜಾನನೋತ್ಸವ: ಮನಗೆದ್ದ ಸಾಂಸ್ಕೃತಿಕ ಕಾರ್ಯಕ್ರಮ

300x250 AD

ಯಲ್ಲಾಪುರ: ಪಟ್ಟಣದ ದೇವಿ ಮೈದಾನದಲ್ಲಿ 40 ನೇ ವರ್ಷದ ಸಾರ್ವಜನಿಕ ಗಜಾನನೋತ್ಸವದ ಪ್ರಯುಕ್ತ ಮಂಗಳವಾರ ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ನಾಗೇಂದ್ರ ವೈದ್ಯ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ನಾಗೇಂದ್ರ ವೈದ್ಯ ಅವರ ಶಿಷ್ಯವೃಂದದವರು ಗಾಯನ ಪ್ರಸ್ತುತಪಡಿಸಿದರು.

 ನಂತರ ಯುವ ಕಲಾವಿದರಿಂದ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ವಿಘ್ನೇಶ್ವರ ಹೆಗಡೆ ಕುಂಟೆಮನೆ, ಮದ್ದಲೆವಾದಕರಾಗಿ ಅನಿರುದ್ಧ ವರ್ಗಾಸರ, ಚಂಡೆವಾದಕರಾಗಿ ಪ್ರಶಾಂತ ಹೆಗಡೆ ಕೈಗಡಿ ಭಾಗವಹಿಸಿದ್ದರು.

300x250 AD

    ಜಾಂಬವನಾಗಿ ವಿನಯ ಭಟ್ಟ ಬೇರೊಳ್ಳಿ, ಕೃಷ್ಣನಾಗಿ ನಾಗರಾಜ ಭಟ್ಟ ಕುಂಕಿಪಾಲ, ಬಲರಾಮನಾಗಿ ನಿರಂಜನ ಜಾಗನಳ್ಳಿ, ಜಾಂಬವತಿಯಾಗಿ ದೀಪಕ ಭಟ್ಟ ಕುಂಕಿ, ನಾರದನಾಗಿ ಶ್ರೀಧರ ಅಣಲಗಾರ ಪಾತ್ರ ನಿರ್ವಹಿಸಿದರು. ಸಮಿತಿಯ ಕಾರ್ಯದರ್ಶಿ ಸಂಜೀವಕುಮಾರ ಹೊಸ್ಕೇರಿ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top