ಶಿರಸಿ:ಲಯನ್ಸ್ ಕ್ಲಬ್, ಶಿರಸಿ, ಲಯನ್ಸ್ ಶಿಕ್ಷಣ ಸಂಸ್ಥೆ, ಲಿಯೋ ಕ್ಲಬ್ ಶಿರಸಿ, ಲಿಯೋ ಕ್ಲಬ್ ಶ್ರೀನಿಕೇತನ ಸಹಯೋಗದಲ್ಲಿ ಅತ್ಯಂತ ಅರ್ಥಪೂರ್ಣ, ಭಾವಪೂರ್ಣವೂ ಆದ ಶಿಕ್ಷಕರ ದಿನಾಚರಣೆ ಪ್ರಯುಕ್ತದ ಗುರುವಂದನಾ ಕಾರ್ಯಕ್ರಮ ನೆರವೇರಿತು. ಖಾಸಗಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಮಾದರಿ ಕಾರ್ಯಕ್ರಮಕ್ಕೆ ಅತ್ಯುತ್ತಮ ಉದಾರಹಣೆ.
ಸೆ.5 ಸೋಮವಾರದಂದು ಲಯನ್ಸ್ ಸಭಾಂಗಣದಲ್ಲೊಂದು ಅವಿಸ್ಮರಣೀಯ ಘಳಿಗೆ ಸೃಷ್ಟಿಯಾಗಿತ್ತು.ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸುವ ಮೂಲಕ ಪ್ರಾರಂಭವಾದ ಶಿಕ್ಷಕರ ದಿನಾಚರಣೆ ಸಂಭ್ರಮಕ್ಕೆ ವಿದ್ಯಾರ್ಥಿಗಳ ಉತ್ಸಾಹದ ಕರತಾಡನ ಮತ್ತಷ್ಟು ಕಳೆಗಟ್ಟಿಸಿತ್ತು.
ಪ್ರತಿ ವರ್ಷದಂತೆ ಶಿರಸಿ ಲಯನ್ಸ್ ಕ್ಲಬ್ ಬಳಗ ಈ ವರ್ಷವೂ ಕೂಡ ಶಿರಸಿ ಲಯನ್ಸ್ ಶಾಲೆಯ ಶಿಕ್ಷಕವೃಂದ, ಶಿಕ್ಷಕೇತರ ಸಿಬ್ಬಂದಿಗಳು ಜೊತೆಗೆ ಈ ವರ್ಷ ಶಿರಸಿ ಲಯನ್ಸ ಕ್ಲಬ್ ಸುವರ್ಣ ಮಹೋತ್ಸವದ ಅಂಗವಾಗಿ ಶಿಕ್ಷಕ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಲಯನ್ಸ್ ಸದಸ್ಯರನ್ನು ಗೌರವಯುತವಾಗಿ ಸನ್ಮಾನಿಸಲಾಯಿತು. ಲಯನ್ ಜಿ.ಎಸ್.ಹೆಗಡೆ ಬಸವನಕಟ್ಟೆ, ಲಯನ್ ಪ್ರೋ. ಎನ್.ವಿ.ಜಿ.ಭಟ್ ., ಲಯನ್ ಪ್ರೋ.ರವಿ ನಾಯಕ್, ಲಯನ್ ಪ್ರೋ.ಎಂ.ಜಿ.ಹೆಗಡೆ, ಎಂ.ಜೆ.ಎಫ್.ಲಯನ್ ಡಾ.ಜಿ.ಎ.ಹೆಗಡೆ ಸೊಂದಾ , ಲಯನ್ ಆರ್.ಕೆ.ಹೆಗಡೆ, ಲಯನ್ ಶರಾವತಿ ಹೆಗಡೆ ಸನ್ಮಾನಕ್ಕೆ ಭಾಜನರಾದರು. ಅನಿಲ್ ಲಬ್ಬಿಯವರು ಶಿಕ್ಷಕರಿಗಾಗಿ ಇರಿಸಿದ ದತ್ತಿನಿಧಿಯ ಪ್ರಸ್ತುತ ಸಾಲಿನ ಪುರಸ್ಕೃತರಾದ ಲಯನ್ಸ್ ಶಾಲೆಯ ಶಿಕ್ಷಕಿ ಶ್ರೀಮತಿ ಪದ್ಮಲತಾ ಶೆಟ್ಟಿ ಮತ್ತು ಲಯನ್ ಎನ್ .ವಿ.ಜಿ ಭಟ್ ದತ್ತಿನಿಧಿ ಪುರಸ್ಕೃತರಾದ ಶ್ರೀಮತಿ ಸೀತಾ ಭಟ್ ಮತ್ತು ಶ್ರೀಮತಿ ಸಂಧ್ಯಾ ಭಟ್ ಇವರನ್ನು ಕೂಡ ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಎಂ.ಜೆ.ಎಫ್. ಲಯನ್ ತ್ರಿವಿಕ್ರಂ ಪಟವರ್ಧನ್ ಸ್ವಾಗತ ಭಾಷಣ ಮಾಡಿದರು. ಲಯನ್ಸ ಡಿಸ್ಟಿಕ್ಟ್ ಸೆಕೆಂಡ್ ಗವರ್ನರ್ ಎಂ.ಜೆ.ಎಫ್. ಲಯನ್ ಮನೋಜ್ ಮೆನಕ್ ಮತ್ತು ಲಯನ್ ರಕ್ಷಾ ಮನೋಜ್ ಮೆನಕ್ ಕಾರ್ಯಕ್ರಮದ ಅತಿಥಿಗಳಾಗಿ ಉಪಸ್ಥಿತರಾಗಿದ್ದರು. ಲಯನ್ ಶ್ರೀಕಾಂತ್ ಹೆಗಡೆ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಲಯನ್ಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲ.ಪ್ರೊ.ಎನ್ ವಿ ಜಿ ಭಟ್ ಹಾಗೂ ಲಯನ್ಸ್ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿಗಳಾದ ರವೀಂದ್ರ ನಾಯಕ್ ರವರು ಶುಭ ಹಾರೈಸಿದರು. ಅತಿಥಿಗಳಾದ ಮನೋಜ್ ಮೆನಕ್ ಮಾತನಾಡುತ್ತ ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು. ಹೊಸದಾಗಿ ಲಯನ್ಸ ಕ್ಲಬ್ ಸದಸ್ಯರಾದ ಲಯನ್ ಬಸವರಾಜ ಚಕ್ರಸಾಲಿ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಲಯನ್ಸ್ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿನಿಯರು ಶಾಲೆಯ ಸಂಗೀತ ಶಿಕ್ಷಕಿ ಶ್ರೀಮತಿ ದೀಪಾ ಶಶಾಂಕ್ ರವರ ಮಾರ್ಗದರ್ಶನದಲ್ಲಿ ಸುಶ್ರಾವ್ಯವಾಗಿ ಗುರುವಂದನಾ ಗೀತೆಯನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಾಧ್ಯಾಪಕ ಶಶಾಂಕ್ ಹೆಗಡೆ ಮತ್ತು ಸಹ ಶಿಕ್ಷಕಿ ಶ್ರೀಮತಿ ಸೀತಾ ಭಟ್ ಮಾತನಾಡುತ್ತಾ ವಿದ್ಯಾರ್ಥಿಗಳ ಯಶಸ್ಸೇ ಪ್ರತಿಯೊಬ್ಬ ಗುರುಗಳಿಗೂ ನಿಜವಾದ ಗುರು ಕಾಣಿಕೆ ಎಂದರು. ಲಯನ್ಸ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದ ಕುಮಾರಿ ಸ್ತುತಿ ತುಂಬಾಡಿ, ಕುಮಾರಿ ಶ್ರೀಲಕ್ಷ್ಮಿ ಹೆಗಡೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಲಯನ್ ರೀಜನಲ್ ಚೇರ್ ಪಸನ್ ಎಂ ಜೆ ಎಫ್ ಜ್ಯೋತಿ ಭಟ್, ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಎಂ.ಜೆ.ಎಫ್ ಲಯನ್ ಪ್ರಭಾಕರ ಹೆಗಡೆ, ಶಿರಸಿ ಲಯನ್ಸ ಕ್ಲಬ್ ಸದಸ್ಯರು ಲಯನ್ಸ್ ಕ್ಲಬ್ನ ಇನ್ನಿತರ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶಿಕ್ಷಕ ವೃಂದವನ್ನು ಅಭಿವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶಿರಸಿ ಲಯನ್ಸ ಕ್ಲಬ್ ಕಾರ್ಯದರ್ಶಿಗಳಾದ ಎಂ.ಜೆ.ಎಫ್. ಲಯನ್ ಶ್ರೀಮತಿ ರಮಾ ಪಟವರ್ಧನ್ ವಂದಿಸಿದರು. ಲಯನ್ ಎಂ.ಆಯ್. ಹೆಗಡೆ ಕಾರ್ಯಕ್ರಮ ನಿರೂಪಿಸಿದರು.
ಎಲ್ಲದರ ಜೊತೆ ಪ್ರಸ್ತುತ ಸಾಲಿನ ಎಸೆಸೆಲ್ಸಿ ವಿದ್ಯಾರ್ಥಿಗಳು ಹಾಗೂ ಲಿಯೋ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗಾಗಿ ಸಾಕಷ್ಟು ಮನೋರಂಜನೆ ಕಾರ್ಯಕ್ರಮಗಳನ್ನು,ಹಲವಾರು ಆಟಗಳನ್ನು ಆಡಿಸುವುದರ ಮೂಲಕ ಶಿಕ್ಷಕರನ್ನು ಮತ್ತೊಮ್ಮೆ ವಿದ್ಯಾರ್ಥಿ ಜೀವನಕ್ಕೆ ಕರೆದೊಯ್ದರು. ಒಟ್ಟಿನಲ್ಲಿ ಇಂದಿನ ಶಿಕ್ಷಣ ದಿನಾಚರಣೆಯ ಸಂಭ್ರಮವು ಲಯನ್ಸ್ ಶಾಲೆಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಿತ್ತು ಎಂಬುದರಲ್ಲಿ ಅತಿಶಯೋಕ್ತಿ ಇಲ್ಲ.