ಶಿರಸಿಃ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರದಲ್ಲಿ 4 ವಿಧಾನ ಸಭಾ ಕ್ಷೇತ್ರಗಳಾದ ಶಿರಸಿ ಸಿದ್ದಾಪುರ, ಮತ್ತು ಹಳಿಯಾಳ, ದಾಂಡೇಲಿ, ಜೋಯಿಡಾ ಹಾಗೂ ಯಲ್ಲಾಪುರ ಮುಂಡಗೋಡ, ಬನವಾಸಿ ಅಲ್ಲದೇ ಕಾರವಾರ ವಿಧಾನ ಸಭಾ ಕ್ಷೇತ್ರದಲ್ಲಿ ಕ್ಷತ್ರೀಯ ಮರಾಠ ಸಮುದಾಯದವರು ಹಾಗೂ ಆ ಸಮುದಾಯದ ಉಪ ಪಂಗಡದವರು ಇದ್ದಾರೆ. ಹಾಗಾಗಿ ನಮ್ಮ ಸಮುದಾಯದ ಮುಖಂಡರಾದ ಜಿ.ಪಂ. ಮಾಜಿ ಉಪಾಧ್ಯಕ್ಷ ಹಾಗೂ ಶಿರಸಿ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಎಲ್. ಟಿ. ಪಾಟೀಲ ಅವರಿಗೆ ಈಗ ಮಾಜಿ ಶಾಸಕ ವಿ.ಎಸ್. ಪಾಟೀಲಯವರಿಂದ ತರುವಾದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆಯ ನಿಗಮ ಅಧ್ಯಕ್ಷ ಸ್ಥಾನವನ್ನು ನೀಡಬೇಕೆಂದು ಉ.ಕ ಜಿಲ್ಲಾ ಛತ್ರಪತಿ ಶಿವಾಜಿ ಸೇನೆ ಜಿಲ್ಲಾಧ್ಯಕ್ಷರಾದ ಮಂಜುನಾಥ, ಜಿಲ್ಲಾ ಉಪಾಧ್ಯಕ್ಷರಾದ ಪುರುಷೋತ್ತಮ ಸಾವಂತ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶಿದ್ದು ತೋರವತ್ ಹಾಗೂ ಮುಂಡಗೋಡ ತಾಲೂಕಾ ಅಧ್ಯಕ್ಷರಾದ ಆನಂದ ಬೊಸಲೆ, ಕಾರವಾರ ತಾಲೂಕಾ ಅಧ್ಯಕ್ಷರಾದ ವಿನಾಯಕ ಸಾವಂತ ಮತ್ತು ಯಲ್ಲಾಪುರ ತಾಲೂಕಾ ಅಧ್ಯಕ್ಷ ಗಾಂಧೀ ಕಿರುವತ್ತಿ, ಅಲ್ಲದೇ ಜಿಲ್ಲಾ ಮರಾಠ ಛತ್ರಪತಿ ಶಿವಾಜಿ ಸೇನೆಯ ಪದಾಧಿಕಾರಿಗಳಾದ ಜಗದೀಶ ತೊರಗಲ್ಲ್, ಬಸವರಾಜ ಕದಂ, ಸಂಪತಕುಮಾರ ಕ್ಯಾಮನಕೇರಿ, ನಾರಾಯಣ ಬಿಡಸಗಾಂವ್, ತಿಮ್ಮಣ್ಣ ಬೆಂಡಿಗೇರಿ, ಕಾಳೇಶ ಕ್ಯಾತನಳ್ಳಿ, ಮತ್ತು ಕುಮಾರ ಕಿರತೆಪ್ಪನವರ್ ಮುಂತಾದವರು ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ನೀಡಿ ಇವರು ಆಗ್ರಹಿಸಿದ್ದಾರೆ.
ಸದ್ಯದಲ್ಲೇ ನಿಯೋಗ : ಈ ಬಗ್ಗೆ ರಾಜ್ಯದ ಮರಾಠಾ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ / ಮಾಜಿ ಶಾಸಕರಾದ ಡಾ|| ಎಂ.ಜಿ. ಮೂಳೆ ರಾಜ್ಯ ಮರಾಠ ಸಮುದಾಯದ ಮುಖಂಡ ವಿಜೇಂದ್ರ ಜಾಧವ ಛತ್ರಪತಿ ಶಿವಾಜಿ ಸೇನೆ ರಾಜ್ಯ ಅಧ್ಯಕ್ಷರಾದ ಮಾರುತಿ ರಾವ್ ಮೊರೆ ಅವರ ನೇತ್ರತ್ವದಲ್ಲಿ ಮರಾಠಾ ಸಮುದಾಯದವರ ನಿಯೋಗವು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪನವರು, ಹಾಗೂ ಬಿ.ಜೆ.ಪಿ. ರಾಜ್ಯಾಧ್ಯಕ್ಷರಾದ ನಳಿನಕುಮಾರ ಕಟಿಲ್, ಸಚಿವರಾದ ಶಿವರಾಮ ಹೆಬ್ಬಾರ ಮುಂತಾದ ರಾಜ್ಯ ಬಿಜೆಪಿ ನಾಯಕರಗಳನ್ನು ಭೇಟಿಯಾಗಿ ಎಲ್.ಟಿ.ಪಾಟೀಲ ಅವರಿಗೆ ಶೀಘ್ರದಲ್ಲೇ ಈ ನಿಗಮಕ್ಕೆ ನಿಯೋಜನೆ ಮಾಡುವಂತೆ ಆಗ್ರಹಿಸಲಾಗುವದೆಂದು ಜಿಲ್ಲಾ ಮರಾಠ ಸಮುದಾಯದ ಮುಖಂಡ ಪಾಂಡುರಂಗ ಪಾಟೀಲ ತಿಳಿಸಿದ್ದಾರೆ.