ನವದೆಹಲಿ: ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಇಂದು ರಾಷ್ಟ್ರೀಯ ಕ್ರೀಡಾ ದಿನದ ಸಂದರ್ಭದಲ್ಲಿ ದೇಶದಾದ್ಯಂತ 26 ಶಾಲೆಗಳಲ್ಲಿ ‘ಮೀಟ್ ದಿ ಚಾಂಪಿಯನ್’ ಉಪಕ್ರಮವನ್ನು ಆಯೋಜಿಸುತ್ತಿದೆ.
ಈ ಉಪಕ್ರಮದ ಭಾಗವಾಗಿರುವ ಕೆಲವು ಪ್ರಮುಖ ಕ್ರೀಡಾಪಟುಗಳೆಂದರೆ ಕಾಮನ್‌ವೆಲ್ತ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ವಿಜೇತ ನಿಖತ್ ಜರೀನ್, ಪ್ಯಾರಾಲಿಂಪಿಕ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತೆ ಭಾವಿನಾ ಪಟೇಲ್, ಟೋಕಿಯೊ ಒಲಿಂಪಿಕ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತ ಮನ್‌ಪ್ರೀತ್ ಸಿಂಗ್ ಇತರರು.
‘ಮೀಟ್ ದಿ ಚಾಂಪಿಯನ್’ ಎಂಬುದು ಒಂದು ವಿಶಿಷ್ಟವಾದ ಶಾಲಾ ಭೇಟಿ ಅಭಿಯಾನವಾಗಿದ್ದು, ಇದನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಪ್ರಾರಂಭಿಸಿದರು. ಕಳೆದ ಕೆಲವು ತಿಂಗಳುಗಳಿಂದ ಇದು ದೇಶದ ವಿವಿಧ ಭಾಗಗಳನ್ನು ತಲುಪಿದೆ. ಶಾಲಾ ಭೇಟಿಯ ಸಮಯದಲ್ಲಿ, ಚಾಂಪಿಯನ್ ಅಥ್ಲೀಟ್ ತಮ್ಮ ಅನುಭವಗಳು, ಜೀವನ ಪಾಠಗಳು ಮತ್ತು ಸರಿಯಾಗಿ ತಿನ್ನುವುದು ಹೇಗೆ ಎಂಬುದರ ಕುರಿತು ಸಲಹೆಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಶಾಲಾ ಮಕ್ಕಳಿಗೆ ಸ್ಪೂರ್ತಿದಾಯಕ ಉತ್ತೇಜನವನ್ನು ನೀಡುತ್ತಾರೆ.
ಸಂಜೆ, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜೊತೆಗೆ ದೇಶದ ಕೆಲವು ಕ್ರೀಡೆಗಳು ಮತ್ತು ಫಿಟ್ ಇಂಡಿಯಾ ಫಿಟ್‌ನೆಸ್ ಐಕಾನ್‌ಗಳೊಂದಿಗೆ ವಿಶೇಷ ವರ್ಚುವಲ್ ಸಂವಾದವನ್ನು ನಡೆಸಲಿದ್ದಾರೆ. ಭಾರತದಲ್ಲಿ ಫಿಟ್ನೆಸ್ ಮತ್ತು ಕ್ರೀಡೆಗಳ ಪ್ರಾಮುಖ್ಯತೆಯನ್ನು ಚರ್ಚಿಸಲಿದ್ದಾರೆ.
ಕೃಪೆ: https://news13.in/https://news13.in/