ಶಿರಸಿ: ನಗರದ ಲಯನ್ಸ್ ಶಾಲೆಯ ಹಿರಿಯ ಹಾಗೂ ಕಿರಿಯ ವಿಭಾಗದ ವಿದ್ಯಾರ್ಥಿಗಳು 2022-23ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಅತ್ಯುತ್ತಮ ಸಾಧನೆಗೈದಿದ್ದಾರೆ.
ಕಿರಿಯರ ವಿಭಾಗದಲ್ಲಿ 15 ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಒಟ್ಟೂ 8 ಬಹುಮಾನ ಗಳಿಸಿದ್ದು, 5 ಪ್ರಥಮ ಸ್ಥಾನ, 3 ದ್ವಿತೀಯ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಹಿರಿಯರ ವಿಭಾಗದಲ್ಲೂ 15 ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು 13 ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ್ದು, ಕ್ರಮವಾಗಿ 8 ಪ್ರಥಮ, 4 ದ್ವಿತೀಯ, 1 ತೃತೀಯ ಸ್ಥಾನ ಪಡೆದಿದ್ದಾರೆ.
ಹಿರಿಯರ ವಿಭಾಗದಲ್ಲಿ ಕನ್ನಡ ಕಂಠ ಪಾಠ ಮತ್ತು ಕಥೆ ಹೇಳುವ ಸ್ಪರ್ಧೆಯಲ್ಲಿ ಚಿನ್ಮಯ್ ಕೆರೆಗದ್ದೆ ,ಸಂಸ್ಕೃತ ಧಾರ್ಮಿಕ ಪಠಣ ಪ್ರಮತ್ ಹೆಗಡೆ, ಅರೇಬಿಕ್ ಪಠಣ ಫರ್ಖಾನ್ ಮೂಡಿ, ಕನ್ನಡ ಭಾಷಣ ಸ್ಕಂದ ಶೆಟ್ಟಿ, ಆಶುಭಾಷಣ ಸೂಫಿಯ ಗುಲಗುಂದಿ ದೀಪ್ತಿ ನಾಯ್ಕ ಭಕ್ತಿ ಗೀತೆ
ಲಾವಣ್ಯ ಹೆಗಡೆ, ಸಂಸ್ಕೃತ ಕಂಠಪಾಠ ಪ್ರಥಮ ಸ್ಥಾನ, ಕ್ಲೇ ಮಾಡಲಿಂಗ್ ಗೌತಮಿ ನಾಯ್ಕ, ಹಾಸ್ಯ ಅಭಯ್ ರಾಜೇಶ್ ಹೆಗಡೆ, ದೀಪ್ತಿ ನಾಯ್ಕ ಲಘು ಸಂಗೀತ ಹಾಗೂ ವನ್ಯಾ ಹೆಗಡೆ ಹಿಂದಿ ಕಂಠಪಾಠ ದ್ವಿತೀಯ ಸ್ಥಾನ, ಇಂಗ್ಲಿಷ್ ಕಂಠಪಾಠ ಸೂಫಿಯ ಗುಲಗುಂದಿ ತೃತೀಯ ಸ್ಥಾನ ಪಡೆದಿರುತ್ತಾರೆ.
ಕಿರಿಯರ ವಿಭಾಗದಲ್ಲಿ ಲಘು ಸಂಗೀತ ಅನ್ವಿತಾ ಹೆಗಡೆ, ಕಥೆ ಹೇಳುವುದು ಸಿರಿ ಹೆಗಡೆ ಅಭಿನಯ ಗೀತೆ ಚೈತನ್ಯ ಹೆಗಡೆ, ಕ್ಲೆಮಾಡೆಲಿಂಗ್ ಅನ್ವಿ ಬಜಗೋಳಿ ಪ್ರಥಮ ಸ್ಥಾನ ಪಡೆದರೆ, ಭಕ್ತಿ ಗೀತೆ ಪ್ರಣತಿ ಹೆಗಡೆ,ಚಿತ್ರಕಲೆ ನಿಶ್ಚಿತ್ ಭಟ್,ಆಶುಭಾಷಣ ಸಿಂಧು ಶೆಟ್ಟಿ,ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆಗೆ ಲಯನ್ಸ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಿರಸಿ ಲಯನ್ಸ ಕ್ಲಬ್ ಬಳಗ, ಶಾಲಾ ಮುಖ್ಯೋಪಾಧ್ಯಾಯ ಶಶಾಂಕ ಹೆಗಡೆ, ಶಿಕ್ಷಕ ವೃಂದ, ಸಾಧಕ ವಿದ್ಯಾರ್ಥಿಗಳನ್ನು ಮತ್ತು ಅವರ ಪಾಲಕರನ್ನು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.