ಶಿರಸಿ : ತಾಲೂಕಿನ ಹುತ್ಗಾರಿನ ಗಣೇಶೋತ್ಸವ ಮಂಡಳಿ ವತಿಯಿಂದ 35ನೇ ವರ್ಷ ಗಣೇಶ ಚತುರ್ಥಿ ಆಚರಣೆ ನಿಮಿತ್ತ ಯೋಧರಿಗೆ ಸಮ್ಮಾನ, ರಸಮಂಜರಿ ಕಾರ್ಯಕ್ರಮಗಳನ್ನು ವಿಶೇಷವಾಗಿ ಹಮ್ಮಿಕೊಳ್ಳಲಾಗಿದೆ.
ಚೌತಿ ಹಬ್ಬದಂದು ಗಣೇಶನ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು, ನಂತರ ಸೆ.3 ರಂದು ಸಂಜೆ 7 ಗಂಟೆಗೆ ಹುತ್ಗಾರಿನಲ್ಲಿಯೇ ಸಭಾ ಕಾರ್ಯಕ್ರಮ ನಡೆಯಲಿದೆ. ಉದ್ಯಮಿಗಳಾದ ಮನು ಹೆಗಡೆ, ನಾಗರಾಜ ವಿಠ್ಠಲಕರ ಹಾಗೂ ಶ್ರೀನಿವಾಸ ಹೆಬ್ಬಾರ್ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಡಿಎಸ್ಪಿ ರವಿ ನಾಯ್ಕ, ಸಿಪಿಐ ರಾಮಚಂದ್ರ ನಾಯಕ, ಪಿಎಸ್ಐ ಈರಯ್ಯ, ಪಿಡಿಒ ಶಿವಕುಮಾರ ಎಮ್.ಪಿ., ಹುತ್ಗಾರ ಗ್ರಾಪಂ ಅಧ್ಯಕ್ಷೆ ಹೇಮಲತಾ ಮಡಿವಾಳ, ಉಪಾಧ್ಯಕ್ಷ ಶೇಖರ ಮಡಿವಾಳ ಆಗಮಿಸಲಿದ್ದಾರೆ.
ಮಾಜಿ ಸೈನಿಕರಾದ ಸುಜಯ್ ಹೆಗಡೆ, ಹೇಮಕರ ನಾಯ್ಕ, ರಾಜೇಶ ನಾಯ್ಕ, ಕೆ.ಜಿ.ಭಟ್, ಸತ್ಯನಾರಾಯಣ ಭಟ್ಟ, ದಿನೇಶ್ ಹೆಗಡೆ ಅವರನ್ನು ಸಮ್ಮಾನಿಸಲಾಗುತ್ತಿದೆ. ನಂತರ ಹೇಮಂತ ಲೈವ್ ಇವೆಂಟ್ಸ ಬೆಂಗಳೂರು ಇವರಿಂದ, ಸರಿಗಮಪ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ವಿಶೇಷ ಆಕರ್ಷಣೆಯಾಗಿ ಗಾಯಕ ಶ್ರೀಹರ್ಷ ಬರಲಿದ್ದು, ಕಲಾಸಕ್ತರು, ಭಕ್ತರು ಆಗಮಿಸಲು ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.