ಕಾರವಾರ: ರೋಟರಿ ಕ್ಲಬ್ ಆಫ್ ಕಾರವಾರ ಇವರವತಿಯಿಂದ ಪ್ರೀಮಿಯರ್ ಪಿ.ಯು. ಕಾಲೇಜಿನಲ್ಲಿ ಹೊಸ ರೋರ್ಯಾಕ್ಟ್ ಸಂಸ್ಥೆಯ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವು ಶಾಲೆಯ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು.
ಪ್ರಾರಂಭದಲ್ಲಿ ವಿದ್ಯಾಲಯದ ಪ್ರಾಂಶುಪಾಲ ರೋ. ಗೋವಿಂದಪ್ಪರವರು ಸ್ವಾಗತಿಸುತ್ತ ರೋಟರಿ ಸಂಸ್ಥೆ ಈ ವರ್ಷ ನಮ್ಮ ವಿದ್ಯಾಲಯಕ್ಕೆ ಹೊಸ ರೋರ್ಯಾಕ್ಟ ಸಂಸ್ಥೆಯನ್ನು ಪ್ರಾರಂಭಿಸಿದೆ. ಇದರಿಂದ ನಮ್ಮ ವಿದ್ಯಾರ್ಥಿಗಳಿಗೆ, ನಮ್ಮ ವಿದ್ಯಾಲಯಕ್ಕೆ ತುಂಬಾ ಸಹಾಯವಾಗಲಿದೆ ಎಂದರು. ರೋರ್ಯಾಕ್ಟ್ ಚೇರ್ಮನ್ ರೋ. ಗೋವಿಂದ್ರಾಯ ಮಾಂಜ್ರೇಕರ ರೋರ್ಯಾಕ್ಟ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಪದಗ್ರಹಣಾಧಿಕಾರಿಯಾಗಿ ಆಗಮಿಸಿದ ಶಿರಸಿ ರೋಟರಿ ಸಂಸ್ಥೆಯ ಡಾ.ದಿನೇಶ ಹೆಗಡೆ, ನೂತನ ರೋರ್ಯಾಕ್ಟ್ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ರೋರ್ಯಾಕ್ಟ್ ವಿಧಿಯನ್ನು ಬೋಧಿಸಿ ವಿದ್ಯಾರ್ಥಿಗಳು ರೋರ್ಯಾಕ್ಟ ಸಂಸ್ಥೆಯಲ್ಲಿ ಮಾಡಬೇಕಾದ ಕೆಲವು ಮುಖ್ಯ ಕಾರ್ಯಕ್ರಮಗಳನ್ನು ವಿವರಿಸಿದರು.
ಇಂಟರಾಕ್ಟ್ ಕ್ಲಬ್ಬಿಗೆ ನೂತನ ಅಧ್ಯಕ್ಷರಾಗಿ ಓಂಕಾರ ಶೆಟ್ಟಿ, ಉಪಾಧ್ಯಕ್ಷರಾಗಿ ಸ್ನೇಹಾ ಡಿ.ಮುಡ್ಸಾಲಿ, ಕಾರ್ಯದರ್ಶಿಯಾಗಿ ಧನುಶ್ಯ ಶೆಟ್ಟಿ, ಖಜಾಂಚಿಯಾಗಿ ಅಶ್ಮಿತಾ ಕುರ್ಡೇಕರ, ಜಂಟಿ ಕಾರ್ಯದರ್ಶಿಯಾಗಿ ಕುಮರಿ ಸಾಕ್ಷಿ ಮಂಜುನಾಥ ಪ್ರಭು, ಸರ್ಜೆಂಟ್-ಎಟ್-ಆರ್ಮ್ ಕುಮಾರಿ ನೇಹಾ ಎನ್.ಮಾದನಗೇರಿಕರ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ರಕ್ಷಿತಾ ಮಾಳಸೇಕರ, ಕಮ್ಯುನಿಟಿ ಸರ್ವಿಸ್ ನಿರ್ದೇಶಕರಾಗಿ ತ್ರಿತಿ ಮೇಥಾ, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಶ್ರೇಯಸ್ ಎಸ್.ಭಟ್, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಮನೀಷ ಡಿ.ನಾಯ್ಕ ಹಾಗೂ ಯೂಥ್ ಸರ್ವಿಸ್ ನಿರ್ದೇಶಕರಾಗಿ ಆರ್ಯಾ ಪಾಟೀಲ ಆಯ್ಕೆಯಾಗಿದ್ದರು.
ರೋಟರಿ ಅಧ್ಯಕ್ಷ ರಾಘವೇಂದ್ರ ಜಿ.ಪ್ರಭು ಮಾತನಾಡುತ್ತ, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬೇಕು ಎನ್ನುವುದನ್ನು ವಿವರಿಸಿದರು. ಯೋಗೀಶ ಭಂಡಾರಕರ, ಡಾ.ದಿನೇಶ ಹೆಗಡೆ ಅವರನ್ನು ಪರಿಚಯಿಸಿದರು. ಕಾರ್ಯದರ್ಶಿ ಗುರುದತ್ತ ಬಂಟ ಹಾಗೂ ನಾಗರಾಜ ಜೋಶಿಯವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿರಸಿ ರೋಟರಿ ಸಂಸ್ಥೆಯ ಡಾ.ಸುಮನ ಹೆಗಡೆ ಉಪಸ್ಥಿತರಿದ್ದರು.
ಶಾಲೆಯ ಶಿಕ್ಷಕ ವಂದದವರು, ಇನ್ನರ್ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಸೋನಾ ಫರ್ನಾಂಡಿಸ್ ಹಾಗೂ ಸದಸ್ಯರು, ರೋರ್ಯಾಕ್ಟ್ ಸಂಸ್ಥೆಯ ಜುನೈದ ಸೈಯದ್ ಹಾಗೂ ಸದಸ್ಯರು ಮತ್ತು ರೋಟರಿ ಸಂಸ್ಥೆಯಿಂದ ಎಂ.ಎ.ಕಿತ್ತೂರ, ಮೋಹನ ನಾಯ್ಕ, ಅಮರನಾಥ ಶೆಟ್ಟಿ, ಸಾತಪ್ಪಾ ತಾಂಡೇಲ್, ಗುರು ಹೆಗಡೆ, ರಾಮಚಂದ್ರ ಪಡವಳಕರ, ಪ್ರಸನ್ನ ತೆಂಡೂಲ್ಕರ, ವಿನೋದ ಕೊಠಾರಕರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶೈಲೇಶ ಹಳದಿಪೂರ ನಡೆಸಿಕೊಟ್ಟರು.