ಯಲ್ಲಾಪುರ: ತಟಗಾರದಲ್ಲಿ ನೂತನ ಗ್ರಾಮ ಅರಣ್ಯ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಇದರ ಅಧ್ಯಕ್ಷರಾಗಿ ನರಸಿಂಹ ಭಟ್ಟ ಬೋಳಪಾಲ ಆಯ್ಕೆಯಾಗಿದ್ದಾರೆ.
ಜೋಡಳ್ಳದ ಲಕ್ಷ್ಮೀ ನರಸಿಂಹ ದೇವಸ್ಥಾನ ಸಭಾ ಭವನದಲ್ಲಿ ಸೋಮವಾರ ತಟಗಾರ ಅರಣ್ಯ ಸಮಿತಿಯ ಗ್ರಾಮ ಸಮೀಕ್ಷೆ ಹಾಗೂ ನೂತನ ಸಮಿತಿ ರಚನೆ ಕಾರ್ಯಕ್ರಮ ನಡೆಯಿತು. ಸಮಿತಿ ಸದಸ್ಯರಾಗಿ ದೇವಕಿ ನಾಗ್ಯಾ ಸಿದ್ದಿ, ಗೋಪಾಲ ನಾಗ್ಯ ಸಿದ್ದಿ, ಸಂಧ್ಯಾ ಗಣಪತಿ ಹೆಗಡೆ, ಮುಕುಂದ ಮರಾಠಿ, ಗವಾರ ಇಸ್ಮಾಯಲ್ ಶೇಖ್, ವಿಶ್ವನಾಥ ಗಣಪತಿ ಭಾಗ್ವತ, ಸವಿತಾ ಶ್ರಿಪತಿ ಹಂಗಾರಿ, ಅಚ್ಯುತಕುಮಾರ, ಅಪರ್ಣ ರವೀಂದ್ರ ಭಟ್ಟ ಹಾಗೂ ರಾಮಚಂದ್ರ ಹಂಗಾರಿ ಆಯ್ಕೆಯಾದರು. ಅರಣ್ಯ ಇಲಾಖೆಯ ಅಲ್ತಾಪ್ ಚೌಕಡಾಕ ಸಮಿತಿಯ ಕಾರ್ಯದರ್ಶಿಯಾಗಿದ್ದು, ಅರಣ್ಯ ಸಮಿತಿಯ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಹರೀಶ ಹರಿಕಂತ್ರ ಗ್ರಾಮ ಸಮೀಕ್ಷೆ ನಡೆಸಿ ತರಬೇತಿ ನೀಡಿದರು. ಅರಣ್ಯ ಇಲಾಖೆಯ ಬಸವಲಿಂಗಪ್ಪ, ಸುಗಮಾದಾರ ಕಿಶೋರ ನಾಯ್ಕ ಕಾರ್ಯಕ್ರಮದಲ್ಲಿದ್ದರು.