ಶಿರಸಿ: ವರ್ಬೆಟಲ್ ಮೆನೇಜಿಂಗ ಟ್ರಸ್ಟೀ ದೀಪಕ ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ವರ್ಬೆಟಲ್:2022 ರ ರಾಜ್ಯ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಚಂದನ ಆಂಗ್ಲ ಮಾಧ್ಯಮ ಶಾಲೆಯ 9 ನೇ ವರ್ಗದ ವಿದ್ಯಾರ್ಥಿಗಳಾದ ಶ್ರೇಯಸ್ ಹೆಗಡೆ ಹಾಗೂ ಪ್ರತೀಕ್ಷಾ ಭಟ್ ಪ್ರಥಮ ಸ್ಥಾನ ಪಡೆದು 20 ಸಾವಿರ ರೂಪಾಯಿ ಹಾಗೂ ಪಾರಿತೋಷಕವನ್ನು ಪಡೆದಿದ್ದಾರೆ .
7ನೇ ವರ್ಗದ ಅನಿರುಧ್ದ್ ಭಟ್ ಮತ್ತು ಶ್ರವಣ ಮಂಗಳೂರು ತೃತೀಯ ಸ್ಥಾನ ಪಡೆದು 5 ಸಾವಿರ ರೂಪಾಯಿ ಹಾಗೂ ಪಾರಿತೋಷಕವನ್ನು ಪಡೆದಿದ್ದಾರೆ . ರಾಜ್ಯದ ಎಲ್ಲಾ ಕಡೆಯಿಂದ ಒಟ್ಟೂ 150 ತಂಡಗಳು ಪಾಲ್ಗೊಂಡಿದ್ದು, ಪೈನಲ್ ಹಂತದ 3 ತಂಡಗಳಲ್ಲಿ ಚಂದನ ಶಾಲೆಯ 2 ತಂಡಗಳು ಭಾಗವಹಿಸಿದ್ದವು.
ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಅಮೋಘ ಸಾಧನೆ ಮಾಡಿ ಶಾಲೆಯ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶಕರಾದ ದಿವ್ಯಾ ಹೆಗಡೆ ,ಸಿಂಧೂರ ಭಟ್, ಕಿರಣ ಭಟ್ ಗೋಣುರ್ ,ಲಕ್ಷ್ಮಿ ಭಟ್,ಆನಂದ ಹೆಗಡೆ ಇವರಿಗೆ ಆಡಳಿತ ಮಂಡಳಿ, ಶಿಕ್ಷಕರು, ಪಾಲಕರು ಹಾಗೂ ಮಕ್ಕಳು ಅಭಿನಂದಿಸಿದ್ದಾರೆ. ವರ್ಬೆಟಲ್ ಚರ್ಚಾ ಸ್ಪರ್ಧೆಯಲ್ಲಿ 6 ನೇ ಬಾರಿಗೆ ಚಂದನ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನದ ಸಾಧನೆ ಮಾಡಿರುವುದು ಗಮನಾರ್ಹ.