Slide
Slide
Slide
previous arrow
next arrow

ಗೀತೆ ಎಲ್ಲ ದೇವರ ಮೇಲೂ ಉಪಾಸನೆಗೆ ಅವಕಾಶ ಕೊಡುತ್ತದೆ: ಸ್ವರ್ಣವಲ್ಲೀ

300x250 AD

ಶಿರಸಿ: ಗೀತೆ ಎಲ್ಲ ದೇವರ ಮೇಲೂ ಉಪಾಸನೆಗೂ ಅವಕಾಶ ಕೊಡುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.

ಅವರು ಸ್ವರ್ಣವಲ್ಲೀಯಲ್ಲಿ ಸಂಕಲ್ಪಿಸಿದ 32ನೇ ಚಾತುರ್ಮಾಸ್ಯ ವೃತಾಚರಣೆಯ ಹಿನ್ನಲೆಯಲ್ಲಿ ಸೋಂದಾ ಕಸಬಾ ಸೀಮೆಯ ಭಕ್ತರು ಸಲ್ಲಿಸಿದ ಪಾದಪೂಜೆ, ಕುಂಕುಮಾರ್ಚನೆ, ಗಾಯತ್ರೀಮಂತ್ರ ಜಪ ಸಹಿತ ವಿವಿಧ ಸೇವೆ, ಧಾರ್ಮಿಕ ಕಾರ್ಯಕ್ರಮಗಳ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು.

300x250 AD

ಶ್ರೀಕೃಷ್ಣ ಪರಮಾತ್ಮ  ಗೀತೆ ಹೇಳಿದ್ದರು ಕೇವಲ ಒಂದೇ ದೇವರ ಉಪಾಸನೆ ಹೇಳಿಲ್ಲ. ಇದನ್ನು ಈಶ್ವರ ಗೀತೆ ಎಂದೂ  ಶಂಕರರು ಹೇಳಿದ್ದರು. ಹೀಗಾಗೇ ಭಗವದ್ಗೀತೆ ಎಂದು ಕರೆಯಲಾಗಿದೆ ಎಂದರು. ಇಷ್ಟದ ದೇವರ ಎದುರು ಕುಳಿತು ಸಹಜ ಆಸಕ್ತಿಯಿಂದ ಅರ್ಚನೆ, ಸ್ತ್ರೋತ್ರ, ಮಂತ್ರ, ಜಪ, ಪೂಜೆ ನಿತ್ಯವೂ ಮಾಡಬೇಕು.  ಒಂದು ದೇವರ ಕುರಿತಾಗಿ ಈ ನಿಯಮಗಳನ್ನು ಅನುಷ್ಠಾನ ಮಾಡಿದರೆ ಆ ದೇವರು ಶ್ರದ್ಧೆ ಉಂಟಾಗುತ್ತದೆ. ಶ್ರದ್ಧೆ ಭಕ್ತಿ ಆಗುತ್ತದೆ ಎಂದ ಶ್ರೀಗಳು, ಯಾವ ಯಾವ ದೇವರನ್ನು ಭಕ್ತಿಯಿಂದ ಆಯಾ ದೇವರ ಮೇಲೆ ಭಕ್ತಿ ಬೆಳೆಯುವಂತೆ ಮಾಡುತ್ತದೆ. ಆಸ್ತೆಯಿಂದ ತೊಡಗಿದರೆ ಶ್ರದ್ಧೆ ಬರುತ್ತದೆ. ಅದರ ಪರಿಣಾಮವೇ ಶ್ರದ್ಧೆ ಆಗುತ್ತದೆ. ಶ್ರದ್ದೆ ಜೊತೆಯಲ್ಲಿ ದೇವರ ಬಗ್ಗೆ ಪ್ರೀತಿ ಸೇರಿದರತೆ ಭಕ್ತಿ ಆಗುತ್ತದೆ.ಭಕ್ತಿ ಬೆಳೆದಾಗ ದೇವರ ಕುರಿತು ಅನುಭವ ಹಾಗೂ ಮತ್ತೂ ಬೆಳೆದಾಗ ದೇವರ ದರ್ಶನಸಾಧ್ಯವಾಗುತ್ತದೆ. ತಪಸ್ಸು ಎಲ್ಲವನ್ನೂ ಭಕ್ತಿ ಮಾರ್ಗದಲ್ಲಿ ತೊಡಗಿಸಕೊಳ್ಳಬೇಕು ಎಂದೂ ವಿವರಿಸಿದರು. ವೆಂಕಟ್ರಮಣ ಹೆಗಡೆ ವಾಜಗದ್ದೆ, ಮಹಾಬಲೇಶ್ವರ ಹೆಗಡೆ ಕಾಸಾಪಾಲ, ಬಾಲಚಂದ್ರ ಶಾಸ್ತ್ರಿಗಳು, ಜಗನ್ನಾಥ ಜೋಶಿ, ಚಿನ್ಮಯ ಜೋಯಿಸರು, ಶಿವರಾಮ ಹೆಗಡೆ ಇತರರು ಇದ್ದರು.

Share This
300x250 AD
300x250 AD
300x250 AD
Back to top